ಗಾಳಿಗೆ ಬುಡಮೇಲಾದ ವಿದ್ಯುತ್ ಕಂಬ: ಕತ್ತಲಲ್ಲಿ ಕಾರವಾರ

ಬುಧವಾರ, ಜೂನ್ 26, 2019
23 °C
ಶೇಜವಾಡ ಸಮೀಪದ ಗುಡ್ಡದಲ್ಲಿ ಹಾದುಹೋಗಿರುವ 33 ಕೆ.ವಿ ಮಾರ್ಗ

ಗಾಳಿಗೆ ಬುಡಮೇಲಾದ ವಿದ್ಯುತ್ ಕಂಬ: ಕತ್ತಲಲ್ಲಿ ಕಾರವಾರ

Published:
Updated:
Prajavani

ಕಾರವಾರ: ನಗರದ ಸುತ್ತಮುತ್ತ ಬುಧವಾರ ಮಧ್ಯಾಹ್ನ ಬೀಸಿದ ರಭಸದ ಗಾಳಿಯು ಇಲ್ಲಿನ ವಿದ್ಯುತ್ ಸಂಪರ್ಕವನ್ನೇ ಬುಡಮೇಲು ಮಾಡಿದೆ. ಶೇಜವಾಡ ಸಮೀಪದ ಗುಡ್ಡದ ತುದಿಯಲ್ಲಿ ಅಳವಡಿಸಲಾಗಿರುವ ಎರಡು ಬೃಹತ್ ವಿದ್ಯುತ್ ಕಂಬಗಳು ನೆಲಕ್ಕೆ ಒರಗಿವೆ.

ಇದರ ಪರಿಣಾಮ ಶೇಜವಾಡದಿಂದ ನಗರಕ್ಕೆ ವಿದ್ಯುತ್ ಪೂರೈಕೆ ಮಾಡುವ 33 ಕೆ.ವಿ ಮಾರ್ಗದಲ್ಲಿ ಈ ಕಂಬಗಳಿವೆ. ವಿದ್ಯುತ್ ಮಾರ್ಗದ ನಿರ್ವಹಣೆಯ ದಿನವೂ ಬುಧವಾರವೇ ಆಗಿರುವ ಕಾರಣ ಬೆಳಿಗ್ಗೆ 10ರಿಂದಲೇ ವಿದ್ಯುತ್ ವ್ಯತ್ಯಯವಾಗುತ್ತಿತ್ತು. ಇದರೊಂದಿಗೆ ಕಂಬಗಳೂ ಮುರಿದ ಕಾರಣ ನಗರಕ್ಕೆ ರಾತ್ರಿಯವರೆಗೂ ವಿದ್ಯುತ್ ‍ಪೂರೈಕೆ ಇರಲಿಲ್ಲ.

ಹೆಸ್ಕಾಂ ಸಿಬ್ಬಂದಿ ಶ್ರಮ: ವಿಷಯ ತಿಳಿದ ಕೂಡಲೇ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ನೆಲಕ್ಕೆ ಉರುಳಿದ ಕಂಬಗಳನ್ನು ತೆರವು ಮಾಡಿ ಹೊಸದಾಗಿ ಕಂಬಗಳನ್ನು ಅಳವಡಿಸಿ ತಂತಿಗಳನ್ನು ಜೋಡಿಸಿದರು. ನಗರಕ್ಕೆ ಪುನಃ ವಿದ್ಯುತ್ ಸಂಪರ್ಕ ನೀಡಲು ಶ್ರಮಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಜೊತೆಗೆ ಹೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಬಿ.ಇಡೂರ್ಕರ್ ಹಾಗೂ ಇತರ ಅಧಿಕಾರಿಗಳೂ ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದರು.

ಕಂಬಗಳು ಗುಡ್ಡದ ಮೇಲೆ ಇದ್ದು, ಅಲ್ಲಿಗೆ ತಲುಪುವ ದಾರಿಯಲ್ಲಿ ಪೊದೆಗಳು ಬೆಳೆದಿವೆ. ಹಾಗಾಗಿ ದುರ್ಗಮ ಹಾದಿಯಲ್ಲಿ ಅಗತ್ಯ ಸಲಕರಣೆಗಳನ್ನು ತೆಗೆದುಕೊಂಡು ಹೋಗಲು ‌ಹೆಚ್ಚಿನ ಸಮಯ ಬೇಕಾಯಿತು. ವಿದ್ಯುತ್ ಸಂಪರ್ಕ ಕೊಡಲು ಸಂಜೆ 7.30ರವರೆಗೆ ಸುಮಾರು ಆರು ಗಂಟೆಗೂ ಅಧಿಕ ಕಾಲ ಹೆಸ್ಕಾಂ ಸಿಬ್ಬಂದಿ ಶ್ರಮಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !