ಕಾರವಾರದ ಕಡಲ ತೀರಕ್ಕೆ ಬಂದ ಚಾಲಕನಿಲ್ಲದ ಮೀನುಗಾರಿಕಾ ದೋಣಿ

7

ಕಾರವಾರದ ಕಡಲ ತೀರಕ್ಕೆ ಬಂದ ಚಾಲಕನಿಲ್ಲದ ಮೀನುಗಾರಿಕಾ ದೋಣಿ

Published:
Updated:

ಕಾರವಾರ(ಉತ್ತರ ಕನ್ನಡ): ಇಲ್ಲಿ ಬುಧವಾರ ತಡರಾತ್ರಿ ಬೀಸಿದ ರಭಸದ ಗಾಳಿಗೆ ಮೀನುಗಾರಿಕಾ ದೋಣಿಯೊಂದು ಅಲಿಗದ್ದಾ ಕಡಲತೀರಕ್ಕೆ ಬಂದು ಅಪ್ಪಳಿಸಿದೆ. ಹವಾಮಾನ ವೈಪರೀತ್ಯದ ಮುನ್ನೆಚ್ಚರಿಕೆಯಿದ್ದ ಕಾರಣ ಮೀನುಗಾರರು ದೋಣಿಗಳನ್ನು ಲಂಗರು ಹಾಕಿದ್ದರು. ಗಾಳಿಯ ರಭಸಕ್ಕೆ ಲಂಗರು ಕಡಿದು ದೋಣಿಯು ಕಡಲತೀರಕ್ಕೆ ಅಪ್ಪಳಿಸಿರಬಹುದು ಎಂದು ಮೀನುಗಾರರು ಊಹಿಸಿದ್ದಾರೆ.

ದೋಣಿಯ ಹೊರಕವಚವನ್ನು ಸ್ಟೀಲ್ ನಿಂದ ನಿರ್ಮಿಸಿರುವ ಕಾರಣ ಅದು ಒಡೆಯಲಿಲ್ಲ. ಮರದಿಂದ ಮಾಡಿದ್ದಾಗಿದ್ದರೆ ಹಾನಿಯ ಪ್ರಮಾಣ ಹೆಚ್ಚುವ ಸಾಧ್ಯತೆಯಿತ್ತು. ಅದನ್ನು ಇಂದು ತೆರವು ಮಾಡದಿದ್ದರೆ ಕೆಸರಿನಲ್ಲಿ ಹೂತು ಹೋಗಬಹುದು ಎಂದು ಮೀನುಗಾರರ ಮುಖಂಡ ವಿನಾಯಕ ಹರಿಕಂತ್ರ ತಿಳಿಸಿದ್ದಾರೆ.

ಈ ದೋಣಿಯು ಗೋವಾ ಮೀನುಗಾರರದ್ದಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಸ್ಥಳೀಯ ಹಾಗೂ ಹೊರ ರಾಜ್ಯಗಳ ನೂರಾರು ಮೀನುಗಾರಿಕಾ ದೋಣಿಗಳು ಇಲ್ಲಿನ ಬಂದರಿನಲ್ಲಿ ಕೆಲವು ದಿನಗಳಿಂದ ಲಂಗರು ಹಾಕಿವೆ.
**

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !