ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಸಾಲ ಬೊಮ್ಮನಳ್ಳಿ ವಿ.ಎಫ್.ಸಿ.ಗೆ ರಾಜ್ಯ ಪರಿಸರ ಪ್ರಶಸ್ತಿ

Last Updated 6 ಜುಲೈ 2022, 15:23 IST
ಅಕ್ಷರ ಗಾತ್ರ

ಶಿರಸಿ: ರಾಜ್ಯ ಸರ್ಕಾರ 2021–22ನೇ ಸಾಲಿಗೆ ನೀಡುವ ‘ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ’ಗೆ ತಾಲ್ಲೂಕಿನ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ ಆಯ್ಕೆಯಾಗಿದೆ.

ಮಲೆನಾಡು–ಕರಾವಳಿ ವಿಭಾಗದಲ್ಲಿ ಅರಣ್ಯ ಪರಿಸರ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

‘15 ವರ್ಷದ ಹಿಂದೆ ಕೈಲಾಸ ಗುಡ್ಡ ರಕ್ಷಣೆಗಾಗಿ ನಡೆದ ಚಳವಳಿ ಸಂದರ್ಭದಲ್ಲಿ ಹುಟ್ಟಿದ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿಯು ಪರಿಸರ ಸಂರಕ್ಷಣೆಗೆ ವಿಶೇಷ ಕೊಡುಗೆ ನೀಡಿದೆ. ಜಲಸಂವರ್ಧನೆ, ಬೆಟ್ಟ ಅಭಿವೃದ್ಧಿ, ಜೇನು ಕೃಷಿ, ಫಲ ವೃಕ್ಷವನ ಸೇರಿದಂತೆ ಹಲವು ಸುಸ್ಥಿರ ಅಭಿವೃದ್ಧಿ ಕಾಯಕದಲ್ಲಿ ಗ್ರಾಮದ ಯುವಜನತೆಯನ್ನು ಸಕ್ರಿಯವಾಗಿ ತೊಡಗಿಸಿದ್ದು ಗಮನಾರ್ಹ’ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT