ಕಾನೂನಿನಲ್ಲಿ ಮಕ್ಕಳಿಗೆ ಸಮಾನ ಅವಕಾಶ: ಟಿ.ಗೋವಿಂದಯ್ಯ

ಶನಿವಾರ, ಏಪ್ರಿಲ್ 20, 2019
31 °C

ಕಾನೂನಿನಲ್ಲಿ ಮಕ್ಕಳಿಗೆ ಸಮಾನ ಅವಕಾಶ: ಟಿ.ಗೋವಿಂದಯ್ಯ

Published:
Updated:
Prajavani

ಕಾರವಾರ: ಮಕ್ಕಳಿಗೆ ಕಾನೂನಿನ ಅಡಿಯಲ್ಲಿ ಸಮಾನವಾದ ಅವಕಾಶಗಳಿದ್ದು, ಅದನ್ನು ಸದುಪಯೋಗ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಲು ಸಾಧ್ಯ. ಸದಭಿರುಚಿಯ ಸಹಜ ಬಾಲ್ಯವನ್ನು ಎಲ್ಲರೂ ಅನುಭವಿಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಆಶಿಸಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೇವಾ ಮನೋಭಾವದೊಂದಿಗೆ ಸಮಾಜಕ್ಕೆ ಕೊಡುಗೆಯಾಗಬೇಕು. ಒಳ್ಳೆಯ ಜೀವನವನ್ನು ರೂಪಿಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಅವರು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಮಂಗಳಾ ಲಕ್ಷ್ಮಿ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಥ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಹೊರ ಹಾಕಲು ಸಹಕಾರಿಯಾಗಿವೆ ಎಂದರು.

ಕೆಡಿಸಿಸಿ ಬ್ಯಾಂಕ್‌ನ ಶಿರಸಿ ಪ್ರಧಾನ ಕಚೇರಿಯ ವಿಭಾಗೀಯ ಅಧಿಕಾರಿ ಸುಮಾ ಬಿ.ನಾಯಕ ಮಾತನಾಡಿ, ‘ಕಷ್ಟಕರ ಸನ್ನಿವೇಶಗಳಲ್ಲಿ ಬಂದ ಮಕ್ಕಳು ಬಾಲಮಂದಿರದಲ್ಲಿ ದಾಖಲಾಗುತ್ತಾರೆ. ವ್ಯಕ್ತಿತ್ವ ವಿಕಸನದಂಥಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಮಾದರಿ ವ್ಯಕ್ತಿಗಳಾಗಬೇಕು’ ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ-1ರ ಅಧ್ಯಕ್ಷೆ ರಾಜೇಶ್ವರಿ.ಕೆ.ಬಿ, ಸದಸ್ಯರಾದ ಜ್ಯೋತಿ ಮಿರಾಶಿ, ಮಂಜುನಾಥ.ವಿ.ಬೋರಕರ, ಮಾರುತಿ ನೀಲೇಕಣಿ, ಬಾಲ ನ್ಯಾಯ ಮಂಡಳಿ ಸದಸ್ಯೆ ಶೀಮತಿ ಅನು ಕಳಸ ಇದ್ದರು.

ತರಬೇತಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಾಲಮಂದಿರದ ಮಕ್ಕಳಿಂದ ವಿವಿಧ ನೃತ್ಯ, ಮನೋರಂಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅಧೀಕ್ಷಕಿ ಸುಮಂಗಲಾ ನಾಯಕ ಸ್ವಾಗತಿಸಿದರು. ದಿವ್ಯಶ್ರೀ ನಾಯಕ ವಂದಿಸಿದರು. ಮೋಹಿನಿ ಕೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಏಳು ದಿನಗಳ ಶಿಬಿರದಲ್ಲಿ ವಿವಿಧ ವಿಷಯಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಯಿತು. ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ಬಾಲಕಿಯರ ಬಾಲಮಂದಿರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !