ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಆರಂಭಕ್ಕೆ ಕಾದಿರುವ ರೈತ

ಜೊಯಿಡಾ: ಇನ್ನೂ ಆರಂಭವಾಗದ ಬಿತ್ತನೆ ಕಾರ್ಯ
Last Updated 20 ಜೂನ್ 2019, 15:37 IST
ಅಕ್ಷರ ಗಾತ್ರ

ಜೊಯಿಡಾ: ಮುಂಗಾರು ಮಳೆ ವಿಳಂಬವಾಗಿರುವ ಕಾರಣತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಇನ್ನೂ ಪ್ರಾರಂಭಗೊಂಡಿಲ್ಲ. ಗದ್ದೆಗಳಿಗೆ ನೀರನ್ನು ಒದಗಿಸುವ ಹಳ್ಳಕೊಳ್ಳಗಳಲ್ಲಿ ನೀರು ಬಂದಿಲ್ಲ.ಬೇಸಾಯಕ್ಕೆತಯಾರಿ ನಡೆಸಿದ್ದ ರೈತರು ಆಗಸದತ್ತ ಮುಖಮಾಡಿದ್ದಾರೆ.

ತಾಲ್ಲೂಕಿನಲ್ಲಿ 4,500 ಹೆಕ್ಟೇರ್ ಮುಂಗಾರು ವಾಡಿಕೆ ಬಿತ್ತನೆ ಕ್ಷೇತ್ರವಿದೆ.ಎರಡು ಮೂರು ದಿನಗಳಲ್ಲಿ ಉತ್ತಮ ಮಳೆಯಾದರೆ ಭತ್ತದ ನಾಟಿಗೆಜಮೀನು ಹದಗೊಳಿಸಬಹುದುಎಂಬುದು ರೈತರ ಅಭಿಪ್ರಾಯವಾಗಿದೆ. ಇದಕ್ಕಾಗಿ ಕೊಟ್ಟಿಗೆ ಗೊಬ್ಬರ ಹಾಕುವ ಕಾರ್ಯ ಪ್ರಗತಿಯಲ್ಲಿದೆ.

ತಾಲ್ಲೂಕಿನಲ್ಲಿ ವರ್ಷಕ್ಕೆ 2,525 ಮಿಲಿಮೀಟರ್ ವಾಡಿಕೆ ಮಳೆಯಾಗುತ್ತದೆ. ಮುಂಗಾರುಪೂರ್ವ ಅಂದರೆ ಜನವರಿಯಿಂದ ಜೂನ್‌ವರೆಗೆಸರಾಸರಿ326 ಮಿಲಿಮೀಟರ್ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ170 ಮಿಲಿಮೀಟರ್ ಮಳೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಜೊಯಿಡಾ, ಕುಂಬಾರವಾಡಾ, ರಾಮನಗರ ಹಾಗೂ ಜಗಲಪೇಟ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ತಾಲ್ಲೂಕಿನಲ್ಲಿ 498.70 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ.210.28 ಕ್ವಿಂಟಲ್ ಬೀಜ ವಿತರಿಸಲಾಗಿದೆ. ಇವುಗಳಲ್ಲಿ ಇಂಟಾನ್, ಜಯ, ಅಭಿಲಾಷ, ಜೆಜಿಎಲ್, ಒಖಿU-1001, ಒಖಿU-1010, ಹೈಬ್ರೀಡ್ ಭತ್ತದ ಬೀಜಗಳು ಸೇರಿವೆ.

‘ತಾಲ್ಲೂಕಿನ ಸಹಕಾರ ಸಂಘಗಳಲ್ಲಿ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ರಸಗೊಬ್ಬರ ಖಾಲಿಯಾದರೆ ಮತ್ತೆ ತರಿಸುವ ವ್ಯವಸ್ಥೆ ಮಾಡಲಾಗುವುದು. ಇಲಾಖೆಯಿಂದ ರೈತರಿಗೆ ಪವರ್ ಟಿಲ್ಲರ್, ಸಣ್ಣ ಟ್ರ್ಯಾಕ್ಟರ್, ಹನಿ ನೀರಾವರಿ ಸಲಕರಣೆಗಳು, ಸ್ಪ್ರೇಪಂಪ್, ಔಷಧ, ಸಾವಯವ ಗೊಬ್ಬರ, ಎರೆಹುಳ ಗೊಬ್ಬರ, ರೆಂಟೆ ಹಾಗೂ ಟ್ರ್ಯಾಕ್ಟರ್ ಚಾಲಿತ ಉಪಕರಣಗಳನ್ನು ರಿಯಾಯತಿ ದರದಲ್ಲಿ ವಿತರಿಸುವ ಅವಕಾಶ ಇದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಪಿ.ಐ.ಮಾನೆ ತಿಳಿಸಿದರು.

‘ಕಳೆದ ಹಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ತುಂಬಾ ಕಡಿಮೆ ಇದೆ. ಪ್ರತಿ ವರ್ಷ ಈ ವೇಳೆಗೆ ಕೃಷಿ ಭೂಮಿ ಉಳುಮೆ ಮಾಡುವ ಕಾರ್ಯ ಮುಗಿಯುತ್ತಿತ್ತು. ಜೂನ್ 22ರ ನಂತರ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.ಮುಂದಿನ ವಾರದಿಂದಾದರೂ ಉಳುಮೆ ಕಾರ್ಯ ಪ್ರಾರಂಭಿಸಬೇಕಿದೆ’ ಎನ್ನುತ್ತಾರೆ ಕಾತೇಲಿಯ ರೈತರ ನಂದಾ ಗಾವಡಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT