ಭಾನುವಾರ, ಜನವರಿ 19, 2020
27 °C
ರೈತ ದಿನಾಚರಣೆಯಲ್ಲಿ ಕೃಷಿ ಸಾಧಕರಿಗೆ ಸನ್ಮಾನ

ಕೃಷಿ ಉದ್ಯಮಕ್ಕೆ ಹಳ್ಳಿಗಳು ಕೇಂದ್ರವಾಗಲಿ: ರಾಜೇಶ್ವರಿ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರೈತರಿಗೆ ಕೃಷಿ ಮಾಹಿತಿ, ಸಾಧಕ ಕೃಷಿಕರಿಗೆ ಸನ್ಮಾನದೊಂದಿಗೆ ಸೋಮವಾರ ಇಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು.

ಸುಭಾಷಚಂದ್ರ ಶಿರಾಲಿ ಹಾಗೂ ರಾಜೇಶ್ವರಿ ಹೆಗಡೆ ಅವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಪರಮೇಶ್ವರ ಹೆಗಡೆ ಕುಳವೆ, ಸರೋಜಾ ಹೆಗಡೆ ಗೋಳಿಕೊಪ್ಪ, ಪ್ರವೀಣ ಗೌಡರ್ ತೆಪ್ಪಾರ, ಪುರುಷೋತ್ತಮ ನಾಯ್ಕ ಗೋಣೂರು, ರಾಮಚಂದ್ರ ಹೆಗಡೆ ಕೊಪ್ಪ ಅವರಿಗೆ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಷಿ ಇಲಾಖೆ, ತಾಲ್ಲೂಕು ಕೃಷಿಕ ಸಮಾಜ, ತೋಟಗಾರಿಕಾ ಕಾಲೇಜು, ಕೃಷಿ ಇಲಾಖೆ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಭಟ್ಟ ಉದ್ಘಾಟಿಸಿದರು. ರೈತರ ಬದುಕು ಕತ್ತಿಯ ತುದಿಯ ಮೇಲಿನ ನಡಿಗೆಯಂತೆ. ಸದಾ ಸವಾಲನ್ನು ಎದುರಿಸುವ ಕೃಷಿಕರು, ಸರ್ಕಾರ ನೀಡುವ ಸೌಲಭ್ಯವನ್ನು ಬಳಸಿಕೊಂಡು ಆರ್ಥಿಕ ಸದೃಢತೆ ಹೊಂದಬೇಕು. ಕೃಷಿ ಯಾಂತ್ರೀಕರಣಕ್ಕೆ ಆದ್ಯತೆ ನೀಡುವ ಮೂಲಕ ಕೂಲಿ ಕಾರ್ಮಿಕರ ಕೊರತೆ ನೀಗಿಸಿಕೊಳ್ಳಬೇಕು ಎಂದರು.

ಉದ್ಯೋಗದ ಆಸೆಯಿಂದ ಯುವಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳು ಖಾಲಿಯಾಗುತ್ತಿವೆ. ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸಿ, ಹಳ್ಳಿಯನ್ನೇ ಇದರ ಕೇಂದ್ರವಾಗಿ ಮಾಡಬೇಕು. ಆ ಮೂಲಕ ಕೃಷಿ ಹಾಗೂ ಹಳ್ಳಿ ಎರಡನ್ನೂ ಉಳಿಸಬೇಕು ಎಂದು ಪ್ರಶಸ್ತಿ ಪಡೆದ ರಾಜೇಶ್ವರಿ ಹೆಗಡೆ ಹೇಳಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ಆಹಾರ ಸ್ವಾವಲಂಬನೆಗೆ ನೆರವಾಗುವ ರೈತರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಎನ್.ಹೆಗಡೆ ಮುರೇಗಾರ, ಬಸವರಾಜ ದೊಡ್ಮನಿ, ಪ್ರಭಾವತಿ ಗೌಡ, ರೂಪಾ ನಾಯ್ಕ, ಕೃಷಿಕ ಸಮಾಜದ ರಾಜ್ಯ ಸಮಿತಿ ಸದಸ್ಯ ವಿನಾಯಕ ಹೆಗಡೆ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಹೆಗಡೆ, ತೋಟಗಾರಿಕಾ ಕಾಲೇಜಿನ ಉಪನ್ಯಾಸಕ ಗುರುಮೂರ್ತಿ, ಶಿವಕುಮಾರ್ ಇದ್ದರು. ರಶ್ಮಿ ಶಹಾಪೂರಮಠ ಸ್ವಾಗತಿಸಿದರು. ವಿವೇಕ ಹೆಗಡೆ ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು