ರಸ್ತೆಯಲ್ಲೇ ಮೀನು ಹಿಡಿದ ಜನರು!

7
ಭಟ್ಕಳ ಬಸ್ ನಿಲ್ದಾಣದಲ್ಲಿ ದೋಣಿ ಓಡಿಸಿದರು...!

ರಸ್ತೆಯಲ್ಲೇ ಮೀನು ಹಿಡಿದ ಜನರು!

Published:
Updated:
 ಬಸ್‌ ನಿಲ್ದಾಣದ ಎದುರಿನ ಗುಂಡಿಯಲ್ಲಿ ನಿಂತಿದ್ದ ಮಳೆ ನೀರಿಗೆ  ಕಾಗದದ ದೋಣಿಗಳನ್ನು ಬಿಟ್ಟು ಮೀನು ಹಿಡಿಯುವ ಪ್ರಹಸನ ನಡೆಸಿದ ಯುವಕರು

ಭಟ್ಕಳ: ಇಲ್ಲಿನ ಬಸ್‌ ನಿಲ್ದಾಣದಲ್ಲೇ ಜನರು ಶುಕ್ರವಾರ ದೋಣಿ ಓಡಿಸಿದರು. ಮೀನು ಹಿಡಿದು ಖುಷಿ ಪಟ್ಟರು. ಗಿಡ ನೆಟ್ಟು ಓಹೋ ಎಂದರು.  ಮಳೆ ನೀರಿಗೆ ಕೆರೆಯಂತಾಗಿರುವ ಬಸ್‌  ನಿಲ್ದಾಣದ ಅವ್ಯವಸ್ಥೆ ಖಂಡಿಸಲು ಸಾಮಾಜಿಕ ಕಾರ್ಯಕರ್ತರು ನಡೆಸಿದ ಈ ಪ್ರಹಸನ ಗಮನ ಸೆಳೆಯಿತು.

ನೀರು ನಿಂತಿದ್ದ ಕಡೆ ಕಾಗದದ ದೋಣಿಗಳನ್ನು ತೇಲಿ ಬಿಟ್ಟರು. ಮೀನು ಹಿಡಿಯಲು ಗಾಣ ಹಾಕಿದ ನಾಟಕವಾಡಿದರು. ಗಿಡಗಳನ್ನು ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದರೂ ಬಸ್‌ ನಿಲ್ದಾಣದ ರಸ್ತೆ ಸರಿಪಡಿಸಿ, ಜನರ ಬದುಕು ಹಸನಾಗಿಸಿ. ಓಡಾಡಲು ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿದರು.

 ಸಾಮಾಜಿಕ ಕಾರ್ಯಕರ್ತ ಮಿಸ್ಬಲ್ ಹಾಕ್ ಮಾತನಾಡಿ, ‘ ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಬಸ್‌ನಿಲ್ದಾಣದ ಮುಂದೆ ಕೆರೆ ಸೃಷ್ಟಿಯಾಗುತ್ತದೆ. ಇದರಿಂದ ಪ್ರಯಾಣಿಕರು ಸೇರಿ ಬಸ್‌ಗಳು ನಿಲ್ದಾಣದೊಳಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ರಬಿ ರುಕ್ನುದ್ದೀನ್, ಸೈಯದ್ ವಾಸಿಂ ಬರ್ಮಾವರ್, ಸನಾವುಲ್ಲಾ ಅಸದಿ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !