ಬಿಡುವಿನ ಬಳಿಕ ಮತ್ತೆ ಮೀನುಗಾರಿಕೆ ಆರಂಭ

7

ಬಿಡುವಿನ ಬಳಿಕ ಮತ್ತೆ ಮೀನುಗಾರಿಕೆ ಆರಂಭ

Published:
Updated:
Deccan Herald

ಕಾರವಾರ:  ಎರಡು ತಿಂಗಳ ಬಿಡುವಿನ ಬಳಿಕ ಮೀನುಗಾರರು ಬುಧವಾರದಿಂದ ಮತ್ತೆ ಮೀನುಗಾರಿಕೆ ಆರಂಭಿಸಿದ್ದಾರೆ. ತಮ್ಮ ಆದಾಯದ ಮೂಲಕ್ಕೆ ಪ್ರಮುಖ ಸಾಧನಗಳಾದ ಬಲೆ, ದೋಣಿಗಳಿಗೆ ಪೂಜೆ ಸಲ್ಲಿಸಿ ಸೂರ್ಯೋದಯಕ್ಕೂ ಮೊದಲೇ ಸಮುದ್ರಕ್ಕಿಳಿದರು.

ನಗರದ ಬೈತಖೋಲ್ ಮೀನುಗಾರಿಕಾ ಬಂದರನ್ನು ನೂರಾರು ಮೀನುಗಾರರು ಆಶ್ರಯಿಸಿದ್ದಾರೆ. ಬಹುತೇಕ ಮಂದಿ ಮಂಗಳವಾರ ರಾತ್ರಿಯೇ ಪೂಜೆ ನೆರವೇರಿಸಿದ್ದರು. ಈ ಬಾರಿ ಉತ್ತಮ ಮಳೆ ಮತ್ತು ಗಾಳಿ ಬೀಸಿರುವ ಕಾರಣ ಮೀನಿನ ಫಸಲು ಚೆನ್ನಾಗಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.

ಮುಂಗಾರು ಹಂಗಾಮಿನ ಮೀನುಗಾರಿಕೆಗೆ ಚಾಲನೆ ಸಿಕ್ಕಿರುವ ಕಾರಣ ಜಿಲ್ಲೆಯ 35 ಸಾವಿರಕ್ಕೂ ಅಧಿಕ ಮೀನುಗಾರರ ಕುಟುಂಬಗಳಲ್ಲಿ ಕೆಲಸ ಗರಿಗೆದರಿದೆ. ಮಾರುಕಟ್ಟೆಗಳಿಗೆ ತಾಜಾ ಮೀನು ಸಾಗಣೆ ಮತ್ತು ಮಾರಾಟ ಚಟುವಟಿಕೆಗಳು ಬಿರುಸಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !