ಶನಿವಾರ, ಅಕ್ಟೋಬರ್ 31, 2020
26 °C
ಐದು ಜಿಲ್ಲಾ ಮುಖ್ಯ ರಸ್ತೆಗಳು ರಾಜ್ಯ ಹೆದ್ದಾರಿಗಳಾಗಿ ಘೋಷಣೆ

ಉತ್ತರಕನ್ನಡ: 1,092 ಕಿ.ಮೀ ರಸ್ತೆ ಮೇಲ್ದರ್ಜೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ 11 ತಾಲ್ಲೂಕುಗಳ 1,092.03 ಕಿ.ಮೀ. ಉದ್ದದ 134 ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಅಲ್ಲದೆ, ಜಿಲ್ಲೆಯ ಒಟ್ಟು 76 ಕಿ.ಮೀ. ಉದ್ದದ ಐದು ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

ಇದರಂತೆ ಗುರುತಿಸಲಾದ ಗ್ರಾಮೀಣ ರಸ್ತೆಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಲಿವೆ. ಅವು ಇನ್ನುಮುಂದೆ ಜಿಲ್ಲಾ ಮುಖ್ಯ ರಸ್ತೆಗಳಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ರಾಜ್ಯ ಹೆದ್ದಾರಿಗಳು: ಯಲ್ಲಾಪುರ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ 93ರಿಂದ ಉಮ್ಮಚಗಿ ಮೂಲಕ ಸಾಗಿ ಕಾತೂರಿನಲ್ಲಿ ರಾಜ್ಯ ಹೆದ್ದಾರಿ 69ನ್ನು ಸೇರುವ  28.05 ಕಿ.ಮೀ. ಉದ್ದದ ರಸ್ತೆ, ಕಾರವಾರ ತಾಲ್ಲೂಕಿನಲ್ಲಿ ಸದಾಶಿವಗಡದಿಂದ ಗೋವಾಗಡಿಗೆ ಸಾಗುವ 8.30 ಕಿ.ಮೀ. ರಸ್ತೆಗಳು ರಾಜ್ಯ ಹೆದ್ದಾರಿಗಳಾಗಲಿವೆ.

ಅಂಕೋಲಾ ತಾಲ್ಲೂಕಿನ ಅಗಸೂರು–ಶಿರಗುಬ್ಬೆ–ಕೊಡ್ಸಾಣಿ ನಡುವಿನ 12.37 ಕಿ.ಮೀ. ಉದ್ದದ ರಸ್ತೆ, ಹೆಬ್ಬಾಲ–ಹೊಸಕಂಬಿ ನಡುವಿನ 2.70 ಕಿ.ಮೀ. ರಸ್ತೆ ಹಾಗೂ ತದಡಿ–ಗೋಕರ್ಣ–ಗಂಗಾವಳಿಯಿಂದ ಮಂಜಗುಣಿ– ಬೇಲೆಕೇರಿ ನಡುವೆ ಸಾಗುವ 25 ಕಿ.ಮೀ. ಉದ್ದದ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು