ಮಂಗಳವಾರ, ಸೆಪ್ಟೆಂಬರ್ 28, 2021
22 °C

ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಸಾಮಾಜಿಕ ಕಾರ್ಯಕರ್ತರಾಗಿದ್ದ ದೀಪಕ ಹೊನ್ನಾವರ ಸ್ಮರಣಾರ್ಥ ಅವರ ಸಹೋದರಿ ಸುಷ್ಮಾ ರಾಜಗೋಪಾಲ ನಗರದ ವಿವಿಧೆಡೆ ಬುಧವಾರ ದಿನಸಿ ಕಿಟ್ ವಿತರಿಸಿದರು.

ಇಲ್ಲಿನ ಬಿಡ್ಕಿಬೈಲ್‍ನಲ್ಲಿ ಕೂಲಿಕಾರ್ಮಿಕರಿಗೆ, ಅಗತ್ಯವಿದ್ದವರಿಗೆ ದಿನಸಿ ಕಿಟ್ ನೀಡಲಾಯಿತು. ಬಳಿಕ ಎಂ.ಇ.ಎಸ್. ನರ್ಸಿಂಗ್ ಕಾಲೇಜ್‍ಗೆ ತೆರಳಿ ಅಲ್ಲಿನ ಬಡ ವಿದ್ಯಾರ್ಥಿಗಳಿಗೆ ಕಿಟ್ ಹಂಚಿಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸುಷ್ಮಾ ರಾಜಗೋಪಾಲ್, ‘ಬಡವರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ. ಮಾನವೀಯ ಗುಣಗಳಿಗೆ ಆದ್ಯತೆ ನೀಡಬೇಕು’ ಎಂದರು.

ಸರಸ್ವತಿ ಹೊನ್ನಾವರ, ಸ್ವಾತಿ ಹೊನ್ನಾವರ, ಸೂರ್ಯಪ್ರಕಾಶ ಹೊನ್ನಾವರ, ಸುಮಾ ಉಗ್ರಾಣಕರ್, ಜಿ.ಎನ್.ಹೆಗಡೆ ಮುರೇಗಾರ, ಸತೀಶ್ ನಾಯ್ಕ, ಪ್ರದೀಪ ಶೆಟ್ಟಿ, ರಾಜು ಉಗ್ರಾಣಕರ್, ಅರವಿಂದ ನೇತ್ರೇಕರ್, ರಮೇಶ ದುಭಾಶಿ, ಶ್ರೀಕಾಂತ ತಾರೀಬಾಗಿಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.