7

ಮಳೆ: ಕಾಲು ಸಂಕ ಕುಸಿತ 

Published:
Updated:
ಮುರಿದ ಬಿದ್ದ ಕಾಲು ಸಂಕವನ್ನು ಜಿಲ್ಲಾ ಪಂಚಾಯಿತಿ ಸದಸ್ಯರು ವೀಕ್ಷಿಸಿದರು. (ವಿಟ್ಲ ಚಿತ್ರ)

 ವಿಟ್ಲ: ವಿಟ್ಲ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೊಳ್ನಾಡು ಗ್ರಾಮದಲ್ಲಿ ಸಿಮೆಂಟ್‌ ಕಾಲುಸಂಕ ಮುರಿದು ಬಿದ್ದು ಕಾಲುದಾರಿ ಸಂಪರ್ಕ ಕಡಿತಗೊಂಡಿದೆ.

ಕೊಳ್ನಾಡು ಗ್ರಾಮದ ಸೆರ್ಕಳ ಪೀಲಿಯಡ್ಕ ಎಂಬಲ್ಲಿರುವ ಕಾಲು ಸಂಕ ಮುರಿದು ಬಿದ್ದಿದೆ. ಇನ್ನೂ ಕೆಲವಡೆ ತೋಟಗಳಿಗೆ ಹಾನಿಯಾಗಿದೆ. ರಸ್ತೆಯಲ್ಲಿ ಮೋರಿಯೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸೆರ್ಕಳ-ಸಾಲೆತ್ತೂರು ಸಂಪರ್ಕಿಸುವ ಕಾಲುದಾರಿ ಕಡಿತಗೊಂಡಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯರಾದ ಸಿ.ಎಚ್ ಅಬೂಬಕ್ಕರ್, ಹಮೀದ್, ಸಾಮಾಜಿಕ ಕಾರ್ಯಕರ್ತ ಮುಸ್ತಫಾ, ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ನಾಗೇಶ ಬೇಟಿ ನೀಡಿ ಪರಿಶೀಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !