ಅರಣ್ಯಗಳ್ಳತನ ತಡೆಗೆ ಆಧುನಿಕ ಸೌಲಭ್ಯ ಒದಗಿಸಿ: ಶಾಂತವೀರ ಶಿವಪ್ಪ ಅಭಿಮತ

7

ಅರಣ್ಯಗಳ್ಳತನ ತಡೆಗೆ ಆಧುನಿಕ ಸೌಲಭ್ಯ ಒದಗಿಸಿ: ಶಾಂತವೀರ ಶಿವಪ್ಪ ಅಭಿಮತ

Published:
Updated:
Deccan Herald

ಶಿರಸಿ: ಅರಣ್ಯಗಳ್ಳತನ ತಡೆಯಲು ಸಿಬ್ಬಂದಿಗೆ ಆಧುನಿಕ ಶಸ್ತ್ರಾಸ್ತ್ರ ಹಾಗೂ ಅಗತ್ಯಕ್ಕೆ ತಕ್ಕಷ್ಟು ವಾಹನ ಪೂರೈಕೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ಇಲ್ಲಿನ ಮಕ್ಕಳ ಉಪವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ, ಅವರು ಮಾತನಾಡಿದರು. ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿದಷ್ಟೂ ಕಾಡುಗಳ್ಳರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ದಾಳಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಅರಣ್ಯ ಸಿಬ್ಬಂದಿ ಜೊತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಕಾಡು ರಕ್ಷಣೆಗೆ ಕೇವಲ ಅರಣ್ಯ ಸಿಬ್ಬಂದಿಯಿಂದ ಮಾತ್ರ ಸಾಧ್ಯವಾಗದೆ ಜನರೂ ಸಹಕಾರ ನೀಡಬೇಕು ಎಂದರು.

ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ ಮಾತನಾಡಿ, ‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಪೊಲೀಸ್ ಹಾಗೂ ಯೋಧರು ಶ್ರಮಿಸಿದಂತೆ, ಅರಣ್ಯ ರಕ್ಷಣೆಗೆ ಅರಣ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಮಾನಸಿಕ ಸ್ಥೈರ್ಯ ಕೆಡಿಸುವ ಸಾಕಷ್ಟು ಸಂದರ್ಭಗಳು ಅರಣ್ಯ ಸಿಬ್ಬಂದಿಗೆ ಎದುರಾಗುತ್ತವೆ. ಅವನ್ನು ಎದುರಿಸಿ ಅರಣ್ಯ ಸಂಪತ್ತು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ಅರಣ್ಯ ರಕ್ಷಣೆಯಲ್ಲಿ ತೊಡಗಿರುವಾಗ ಹುತಾತ್ಮರಾದ ಸಿಬ್ಬಂದಿಯನ್ನು ಸ್ಮರಿಸಿ, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಬ್ಯಾಂಡ್ ವಾದ್ಯ ಹಾಗೂ ತೋಪು ಗೌರವವನ್ನು ಕಾರವಾರದ ಪೊಲೀಸ್ ಇಲಾಖೆ ಸಿಬ್ಬಂದಿ ನಡೆಸಿಕೊಟ್ಟರು. ಡಿಸಿಎಫ್ ಎನ್.ಡಿ.ಸುದರ್ಶನ್, ಎಎಸ್ಪಿ ನಾಗೇಶ ಡಿ.ಎಲ್, ಎಸ್.ಜಿ.ಹೆಗಡೆ  ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !