ಮಂಗಳವಾರ, ಆಗಸ್ಟ್ 20, 2019
27 °C

ಸಿದ್ದಾಪುರ: ಮಳೆಗೆ ಮರ ಬಿದ್ದು ಅರಣ್ಯ ರಕ್ಷಕ ಸಾವು 

Published:
Updated:

ಸಿದ್ದಾಪುರ: ಮಳೆ ಗಾಳಿಗೆ ಮರ ಬಿದ್ದು ಅರಣ್ಯ ರಕ್ಷಕರೊಬ್ಬರು ಮೃತಪಟ್ಟಿದ್ದಾರೆ. ತಾಲ್ಲೂಕಿನ ಮಾವಿನಗುಂಡಿ ರಸ್ತೆಯ ಕುಳಿಬಿಡು ಬಳಿ ಘಟನೆ ನಡೆದಿದೆ‌.

ಅರಣ್ಯ ರಕ್ಷಕ ಶಶಿಧರ್ (58) ಮೃತಪಟ್ಟ  ದುರ್ದೈವಿ.

ಕರ್ತವ್ಯದ ನಿಮಿತ್ತ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ದ್ವಿಚಕ್ರ ವಾಹನದ ಮೆಲೆ ಮರಬಿದ್ದು ಮರದಡಿಗೆ ಸಿಲುಕಿ ಅವರು ಸ್ಥಳದಲ್ಲೇ ಮೃತಪಟ್ಟರು. 

ಬೃಹದಾಕಾರದ ಮರ ಬಿದ್ದಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ತೆರವು ಕಾರ್ಯ ನಡೆಯುತ್ತಿದೆ.  ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

Post Comments (+)