ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಮಾಸ್ಕ್ ನೀಡುತ್ತಿರುವ ಯುವಕ

Last Updated 28 ಮಾರ್ಚ್ 2020, 15:06 IST
ಅಕ್ಷರ ಗಾತ್ರ

ಮುಂಡಗೋಡ: ಕೊರೊನಾ ವೈರಾಣುವಿನ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಲ್ಲೆಡೆ ಆದ್ಯತೆ ನೀಡಲಾಗುತ್ತಿದೆ. ತಾಲ್ಲೂಕಿನ ಚಿಗಳ್ಳಿ ಗ್ರಾಮದ ಯುವಕನೊಬ್ಬ ಬಟ್ಟೆಯಿಂದ ಮಾಸ್ಕ್ ತಯಾರಿಸಿ, ಉಚಿತವಾಗಿ ಜನರಿಗೆ ಹಂಚುತ್ತ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಸಂತೋಷ ಆಲದಕಟ್ಟಿ ಅವರು 200-300 ಮಾಸ್ಕ್‌ಗಳನ್ನು ತಯಾರಿಸಿದ್ದಾರೆ. ಹಾಲು ಮಾರುವ, ಪತ್ರಿಕೆ ಹಂಚುವ ಹುಡುಗರು ಸೇರಿದಂತೆ ಕೃಷಿಕರಿಗೆ ಉಚಿತವಾಗಿ ಅವುಗಳನ್ನು ವಿತರಿಸಲು ಮುಂದಾಗಿದ್ದಾರೆ. ಎಲ್ಲೆಡೆ ಮಾಸ್ಕ್‌ಗಳ ಕೊರತೆ ಇರುವ ಇಂತಹ ಸಮಯದಲ್ಲಿ, ಸಂತೋಷ ನಿರ್ಧಾರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಹಳ್ಳಿಗಳಲ್ಲಿ ಮಾಸ್ಕ್‌ಗಳು ಸಿಗುವುದು ಕಡಿಮೆ. ದುಡ್ಡಿದ್ದವರು ಪೇಟೆಯಿಂದ ತರುತ್ತಾರೆ. ಆದರೆ ಈಗ ಎಲ್ಲವೂ ಬಂದ್ ಆಗಿದ್ದರಿಂದ, ಬಿಡುವಿನ ಅವಧಿಯಲ್ಲಿ ಬಟ್ಟೆಯಿಂದ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದೇನೆ. ಎಷ್ಟು ಸಾಧ್ಯವಾಗುತ್ತದೋ ಅಷ್ಟನ್ನು ತಯಾರಿಸಿ, ಉಚಿತವಾಗಿ ಕೊಡುತ್ತೇನೆ' ಎನ್ನುತ್ತಾರೆ ಸಂತೋಷ ಆಲದಕಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT