ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಹೆಚ್ಚುವರಿ 343 ಕ್ವಿಂಟಲ್ ಅಕ್ಕಿ ಅಗತ್ಯ

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಮೂರು ತಿಂಗಳ ಪಡಿತರ ವಿತರಣೆಗೆ ಸಿದ್ಧತೆ
Last Updated 12 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕಾರವಾರ:ಬಡತನ ರೇಖೆಗಿಂತ ಕೆಳಗಿನವರ ಪಡಿತರ ಚೀಟಿಗೆ (ಬಿ.ಪಿ.ಎಲ್) ಅರ್ಜಿ ಸಲ್ಲಿಸಿದವರಿಗೂ ಮೂರು ತಿಂಗಳ ಪಡಿತರವನ್ನು ಉಚಿತವಾಗಿ ನೀಡಲು ಸರ್ಕಾರ ಆದೇಶಿಸಿದೆ. ಇದಕ್ಕೆ ಜಿಲ್ಲೆಗೆ ಒಟ್ಟು 343 ಕ್ವಿಂಟಲ್ ಅಕ್ಕಿ ಅಗತ್ಯವಿದೆ.

‘ಜಿಲ್ಲೆಯಲ್ಲಿಬಿ.ಪಿ.ಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಪ್ರತಿ ಅರ್ಜಿಗೂ ತಲಾ 10 ಕೆ.ಜಿ.ಯಂತೆ ಅಕ್ಕಿ ವಿತರಣೆಯಾಗಲಿದೆ. ಇದೇ ರೀತಿ, ಬಡತನ ರೇಖೆಗಿಂತ ಮೇಲಿನವರ ಪಡಿತರ ಚೀಟಿಯ ಅರ್ಜಿದಾರರಲ್ಲಿ ಅಕ್ಕಿ ಬೇಕು ಎಂದು ನೊಂದಾಯಿಸಿಕೊಂಡವರಿಗೆ ಪ್ರತಿ ಕೆ.ಜಿ.ಗೆ ₹ 15ರಂತೆ ದರ ಪಡೆದು ನೀಡಲಾಗುತ್ತದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.

‘‍ಎ.ಪಿ.ಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರಿಗೆ ಐದು ಕೆ.ಜಿ, ಇಬ್ಬರು ಅಥವಾ ಹೆಚ್ಚಿನವರಿದ್ದರೆ 10 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 16,149 ಮಂದಿ ಅಂತ್ಯೋದಯ ಯೋಜನೆಯ ಫಲಾನುಭವಿಗಳಾಗಿದ್ದಾರೆ.30 ಸಾವಿರ ಮಂದಿ ಎ.ಪಿ.ಎಲ್ ಕಾರ್ಡ್‌ದಾರರು ಅಕ್ಕಿ ಬೇಕೆಂದು ನೊಂದಾಯಿಸಿಕೊಂಡಿದ್ದಾರೆ. ಅವರ ಪೈಕಿ 4 ಸಾವಿರ ಮಂದಿ ಏಕ ಸದಸ್ಯರಿದ್ದಾರೆ’ ಎಂದು ಅಂಕಿ ಅಂಶ ವಿವರಿಸಿದರು.

‘ಈಗಾಗಲೇ ಜಾರಿಯಲ್ಲಿರುವ ಪಡಿತರ ವ್ಯವಸ್ಥೆಯಂತೆಯೇ ಇದು ಮುಂದುವರಿಯಲಿದೆ. ಕೊರೊನಾ ಸಂಬಂಧ ಲಾಕ್‌ಡೌನ್‌ನಿಂದ ಜನರಿಗೆ ಆಹಾರದ ಕೊರತೆ ಆಗಬಾರದು ಎಂಬ ಸದುದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ವಿಸ್ತರಿಸಿದೆ.ಅರ್ಜಿ ಸಲ್ಲಿಸಿದವರು ಅರ್ಹತಯನ್ನುಪರಿಶೀಲಿಸಲು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಾಧ್ಯವಿಲ್ಲ. ಆದ್ದರಿಂದ ಉದಾರವಾಗಿ ಪಡಿತರ ಸಾಮಗ್ರಿ ನೀಡಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಕೂಡ ನಗರದಲ್ಲಿ ಶನಿವಾರ ತಿಳಿಸಿದ್ದರು.

‘ಅಕ್ಕಿ ಸಂಗ್ರಹವಿದೆ’:‘ಜಿಲ್ಲೆಯ ಹೆಚ್ಚುವರಿ ಫಲಾನುಭವಿಗಳಿಗೆ ಅಕ್ಕಿ ಪೂರೈಕೆ ಮಾಡಲು ಯಾವುದೇ ಸಮಸ್ಯೆಯಿಲ್ಲ.ನಮ್ಮ ಇಲಾಖೆಯ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿಅಕ್ಕಿ ಸಂಗ್ರಹವಿದೆ. ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಿಕೊಡುವ ವಿಧಾನದ ಬಗ್ಗೆಏ.20ರ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಪುಟ್ಟಸ್ವಾಮಿ ಸ್ಪಷ್ಟಪಡಿಸಿದರು.

‘ಜಿಲ್ಲೆಯ ಮಲೆನಾಡು ತಾಲ್ಲೂಕುಗಳಿಗೆ ಹುಬ್ಬಳ್ಳಿಯಿಂದ,ಭಟ್ಕಳ ತಾಲ್ಲೂಕಿಗೆಉಡುಪಿ ಜಿಲ್ಲೆಯಿಂದ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರತಾಲ್ಲೂಕುಗಳಿಗೆಸಿದ್ದರ ಗ್ರಾಮದಲ್ಲಿರುವ ಗೋದಾಮಿನಿಂದ ಅಕ್ಕಿ ಪೂರೈಕೆ ಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯ ಚಿತ್ರಣ

* 3,427 - ಬಿ.ಪಿ.ಎಲ್ ಅರ್ಜಿದಾರರು

* 3,008 - ಎ.ಪಿ.ಎಲ್ ಅರ್ಜಿದಾರರು

* 3.08 ಲಕ್ಷ - ಬಿ.ಪಿ.ಎಲ್ಫಲಾನುಭವಿಗಳು

* 30 ಸಾವಿರ - ಎ.ಪಿ.ಎಲ್ ಫಲಾನುಭವಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT