ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ತಾಜಾ ಬಂಗಡೆ, ಸಮದಾಳೆಯ ಸಂಚಲನ!

ಕುಮಟಾದಲ್ಲಿ ಮೀನುಗಾರರ ಬಲೆಗೆ ಬಿದ್ದ ಭರಪೂರ ಮೀನು: ಗ್ರಾಹಕರ ಸಂಭ್ರಮ
Last Updated 15 ಸೆಪ್ಟೆಂಬರ್ 2019, 4:38 IST
ಅಕ್ಷರ ಗಾತ್ರ

ಕುಮಟಾ: ಕಳೆದ ವರ್ಷ ಮಂಜುಗಡ್ಡೆಯ ಪೆಟ್ಟಿಗೆಯಲ್ಲಿ ಶೇಖರಿಸಿಟ್ಟ ಮೀನನ್ನು ಇಷ್ಟು ದಿನ ತಿಂದು ಬೇಸತ್ತವರಿಗೆ ಶನಿವಾರ ವಿಶೇಷ ಕಾದಿತ್ತು. ಪಟ್ಟಣದ ಮಾರುಕಟ್ಟೆಗೆ ಬಂದ ತಾಜಾ ಬಂಗಡೆ, ಸಮದಾಳೆ, ಮೋರಿ (ಶಾರ್ಕ್) ಮುಂತಾದ ಮೀನುಗಳಿಗೆ ಭಾರಿ ಬೇಡಿಕೆ ಕಂಡುಬಂತು.

‘ಸಾರಿಗೆ ಮೀನಿಲ್ಲ, ಊಟ ಸೇರೋಲ್ಲ’ ಎಂಬ ಮಾತು ಮೀನು ತಿನ್ನುವವರ ನಡುವೆ ಶುಕ್ರವಾರದವರೆಗೆ ವಿನಿಮಯವಾಗುತ್ತಿತ್ತು. ಶನಿವಾರ ಬೆಳಗಿನ ಜಾವ ಮಳೆ ನಿಂತು, ವಾತಾವರಣ ತಿಳಿಯಾಗಿದ್ದನ್ನು ನೋಡಿದ ಮೀನುಗಾರರು ಸಮುದ್ರಕ್ಕಿಳಿದರು. ತಮ್ಮ ದೋಣಿಗಳಲ್ಲಿ ರಾಶಿ ರಾಶಿ ಮೀನು ಹೊತ್ತು ತಂದರು.

ಮೀನು ದೋಣಿ ಸಮುದ್ರದಿಂದ ವನಳ್ಳಿ, ಹೆಡ್ ಬಂದರು, ಅಳ್ವೆದಂಡೆ ತೀರಕ್ಕೆಬರುಷ್ಟರಲ್ಲೇಮೀನುಪ್ರಿಯರಿಗೆ ಮಾಹಿತಿ ರವಾನೆಯಾಯಿತು. ಶನಿವಾರ ಮೀನು ತಿನ್ನದ ಕೆಲವರು ಭಾನುವಾರಕ್ಕೆ ಇಟ್ಟುಕೊಂಡರಾಯಿತು ಎಂದು ಮೀನು ಮಾರುಕಟ್ಟೆಗೆ ಧಾವಿಸಿದರು.

ಸಮುದ್ರದಲ್ಲಿ ಹೆಚ್ಚಿನ ಪ್ರಮಾಣದ ಮೀನು ಸಿಕ್ಕ ಸಂಗತಿ ತಿಳಿದ ಕೆಲವು ಮೀನು ಸಗಟು ವ್ಯಾಪಾರಿಗಳು ಶಿರಸಿ, ಸಿದ್ದಾಪುರ, ದಾಂಡೇಲಿ ಮುಂತಾದ ಊರುಗಳಿಗೆ ಮೀನು ಸಾಗಿಸಲು ತಮ್ಮ ವಾಹನ ಸಹಿತ ಮಾರುಟ್ಟೆಯಲ್ಲಿ ಕಾದರು. ಮೀನುಗಾರ ಮಹಿಳೆಯರು ರಸ್ತೆ ಬದಿಯೇ ಮೀನು ಮಾರಾಟಕ್ಕೆ ಕುಳಿತರು. ಇದರಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಮೀನು ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನ ಪರದಾಡುವಂತಾಯಿತು.

ಶನಿವಾರಕ್ಕಿಂತ ಭಾನುವಾರ ಮೀನಿಗೆ ಬೇಡಿಕೆ ಹೆಚ್ಚು. ಮೀನು ಸಿಕ್ಕಾಗಲೇ ತರದಿದ್ದರೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ಮೀನು ಸಿಗದಿರಬಹುದು. ಭಾನುವಾರವೇನಾದೂ ಮೀನುಗಾರರು ಸಮುದ್ರಕ್ಕಿಳಿಯದಿದ್ದರೆ ವಾರದ ರಜೆಯ ಒಂದು ದಿನವೂ ಮೀನೂಟದ ಅವಕಾಶ ತಪ್ಪಿ ಹೋಗುತ್ತದೆ.

ಜೇಬಿಗೆ ಹೊರೆಯಾಗಲಿಲ್ಲ:ಒಂದು ತಿಂಗಳ ಹಿಂದೆ ಮಾರುಕಟ್ಟೆಗೆ ಬಂದಿದ್ದ ತಾಜಾ ಸಮದಾಳೆ, ಬಂಗಡೆ ₹ 100ಕ್ಕೆ 7– 8ರಂತೆ ಮಾರಾಟವಾಗಿತ್ತು. ಶನಿವಾರ ಕೊಂಚ ದೊಡ್ಡ ಗಾತ್ರದ ಇದೇ ಮೀನುಗಳು ₹ 100ಕ್ಕೆ 10, 12 ಹಾಗೂ ನಂತರ 15ರಂತೆಯೂ ಮಾರಾಟವಾಯಿತು ಎಂದು ವ್ಯಾಪಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT