ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾದಲ್ಲಿ ಟ್ಯಾಂಕರ್ ಪಲ್ಟಿ: ಅನಿಲ ಸೋರಿಕೆ

Last Updated 26 ಸೆಪ್ಟೆಂಬರ್ 2020, 6:24 IST
ಅಕ್ಷರ ಗಾತ್ರ

ಕಾರವಾರ: ಅಡುಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಕುಮಟಾ ಸಮೀಪದ ಹಂದಿಗೋಣದಲ್ಲಿ ಶನಿವಾರ ಬೆಳಿಗ್ಗೆ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಅಡ್ಡವಾಗಿ ಬಿದ್ದಿದ್ದು, ಅನಿಲ ಸೋರಿಕೆಯಾಗುತ್ತಿದೆ.

ಮಂಗಳೂರಿನ ಎಂ.ಆರ್.ಪಿ.ಎಲ್.ನಿಂದ ಬರುತ್ತಿದ್ದ ಟ್ಯಾಂಕರ್ ನ ಚಾಲಕ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಪಲ್ಟಿಯಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಮನೆಗಳಲ್ಲಿ ವಿದ್ಯುತ್ ಉಪಕರಣಗಳನ್ನು ಬಳಕೆ ಮಾಡದಂತೆ ಮತ್ತು ಬೆಂಕಿ ಹಚ್ಚದಂತೆ ಪೊಲೀಸರು ಧ್ವನಿವರ್ಧಕದಲ್ಲಿ ಸೂಚನೆ ನೀಡುತ್ತಿದ್ದಾರೆ. ವಾಹನ ಸಂಚಾರವನ್ನು ಟ್ಯಾಂಕರ್ ಬಿದ್ದ ಸ್ಥಳದಿಂದ ಎರಡೂ ಕಡೆ ಅರ್ಧ ಕಿಲೋಮೀಟರ್ ದೂರದಲ್ಲೇ ತಡೆಹಿಡಿಯಲಾಗಿದೆ. ಈಗಾಗಲೇ ಟ್ಯಾಂಕರ್ ಸಮೀಪ ಇರುವ, ಹೊನ್ನಾವರ ಕಡೆ ಹೋಗುವ ವಾಹನಗಳನ್ನು ಕುಮಟಾದ ಗಿಬ್ ವೃತ್ತದಿಂದ ಸಿದ್ದಾಪುರ ರಸ್ತೆಯ ಮೂಲಕ ಚಂದಾವರಕ್ಕೆ ತಲುಪಿ ಹೊನ್ನಾವರ ರಸ್ತೆಗೆ ಕಳುಹಿಸಲಾಗಿತ್ತಿದೆ. ಹೆದ್ದಾರಿಯ ಎರಡೂ ಕಡೆಗಳಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT