ಬುಧವಾರ, ಸೆಪ್ಟೆಂಬರ್ 22, 2021
27 °C

ಕಾರವಾರ: ಸ್ಯಾನಿಟರಿ ಪ್ಯಾಡ್‌ಗಳ ಜೊತೆ ಮದ್ಯ ಸಾಗಣೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸ್ಯಾನಿಟರಿ ಪ್ಯಾಡ್‌ಗಳಿದ್ದ ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 102 ಲೀಟರ್ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು, ಜೊಯಿಡಾ ತಾಲ್ಲೂಕಿನ ಅನಮೋಡ ತನಿಖಾ ಠಾಣೆಯ ಮುಂದೆ ಮಂಗಳವಾರ ವಶ ಪಡಿಸಿಕೊಂಡಿದ್ದಾರೆ.

ರಾತ್ರಿ 2ರ ಸುಮಾರಿಗೆ ತನಿಖಾ ಠಾಣೆ ಬಳಿಗೆ ಗೋವಾ ಕಡೆಯಿಂದ ಬಂದ ಲಾರಿಯನ್ನು ಪೊಲೀಸರು ಪರಿಶೀಲನೆ ಮಾಡಿದರು. ಆಗ ಸ್ಯಾನಿಟರಿ ಪ್ಯಾಡ್‌ಗಳ ಪೊಟ್ಟಣಗಳ ಹಿಂದೆ ಮದ್ಯದ ಬಾಟಲಿಗಳು ಕಂಡುಬಂದವು. ಈ ಸಂಬಂಧ ಲಾರಿ ಚಾಲಕ, ತಮಿಳುನಾಡು ಕೊಯಮತ್ತೂರಿನ ಸುಂದರರಾಜ್ ರಾಮಸ್ವಾಮಿ (45) ಎಂಬಾತನನ್ನು ಬಂಧಿಸಲಾಗಿದೆ. 

ವಶಪಡಿಸಿಕೊಂಡ ಮದ್ಯವು ಸುಮಾರು ₹ 43 ಸಾವಿರದ್ದಾಗಿದೆ. ಲಾರಿಯು ಅಂದಾಜು ₹ 18 ಲಕ್ಷ ಮೌಲ್ಯದ್ದು ಹಾಗೂ ಸ್ಯಾನಿಟರಿ ಪ್ಯಾಡ್‌ಗಳು ₹ 11.50 ಲಕ್ಷ ಮೊತ್ತದಾಗಿವೆ. ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ₹ 29.93 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಾರ್ಯಾಚರಣೆಯ ಸಂದರ್ಭದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ರೇಷ್ಮಾ ಬಾನಾವಳಿಕರ್, ಅಬಕಾರಿ ರಕ್ಷಕರಾದ ಎಂ.ಕೆ.ಮೊಗೇರ, ಸದಾಶಿವ ರಾಠೋಡ, ಉಳ್ಳಪ್ಪ ತಳಸೆ, ಟಿ.ಬಿ.ಗೊಂಡ ಹಾಗೂ ದೀಪಕ್ ಬಾರಾಮತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು