ಶನಿವಾರ, ಜೂಲೈ 11, 2020
25 °C

ಗೋಕರ್ಣ: ರಭಸದ ಗಾಳಿಗೆ ಹಲವೆಡೆ ಉರುಳಿಬಿದ್ದ ಮರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ಪಶ್ಚಿಮ ಕರಾವಳಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಬೀಸಿದ ರಭಸದ ಗಾಳಿಗೆ ಗೋಕರ್ಣದಲ್ಲಿ ಹಲವು ಮರಗಳು ಧರೆಗೆ ಉರುಳಿದ್ದು ನಾಗಬೀದಿಯಲ್ಲಿರುವ ನಾಗೇಶ್ವರ ದೇವಸ್ಥಾನದ ಮೇಲೆ ಒಂದು ಮಾವಿನ ಮರ, ಮೂರು ತೆಂಗಿನ ಮರ ಹಾಗೂ ಒಂದು ಅಡಿಕೆ ಮರ ಬಿದ್ದಿದ್ದು ಒಂದು ಭಾಗ ಭಾಗಶಃ ಹಾನಿಯಾಗಿದೆ.

ಅದೇ ರೀತಿ ಸಮುದ್ರ ತೀರದಿಂದ ಮುಖ್ಯ ರಸ್ತೆಗೆ ಹೋಗುವ ದಾರಿಯಲ್ಲಿ ಹೊಸದಾಗಿ ಕಟ್ಟಿದ ಅಂಗಡಿಯ ಮೇಲೆ ತೆಂಗಿನ ಮರ ಉರುಳಿಬಿದ್ದು ಅಪಾರ ನಷ್ಟ ಸಂಭವಿಸಿದೆ. ಬಿಜ್ಜೂರು, ರುದ್ರಪಾದ ಸೇರಿದಂತೆ ಸಮುದ್ರದ ಬದಿಯಲ್ಲಿ ಹಲವು ಮರಗಳು ಗಾಳಿಗೆ ನೆಲಕ್ಕೆ ಉರುಳಿದೆ. ನಷ್ಟ ಎಷ್ಟಾಗಿದೆ ಎಂದು ಅಂದಾಜಿಸಬೇಕಿದೆ.

ಗಾಳಿಯ ಸಂಗಡ ಮಳೆಯೂ ಬರುತ್ತಿದ್ದು ಆದರೆ ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು