ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಡ್‌ ಫ್ರೈಡೇ’ ಮನೆಗಳಲ್ಲೇ ಆಚರಣೆ

Last Updated 10 ಏಪ್ರಿಲ್ 2020, 16:15 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮೀಯರು ಈ ಬಾರಿ ‘ಶುಭ ಶುಕ್ರವಾರ’ವನ್ನು (ಗುಡ್ ಫ್ರೈಡೇ) ಮನೆಗಳಲ್ಲೇ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಧರ್ಮಗುರುಗಳು ನೆರವೇರಿಸಿದ ಧಾರ್ಮಿಕವಿಧಿ ವಿಧಾನಗಳನ್ನುಯೂಟ್ಯೂಬ್ ಮೂಲಕ ಪ್ರಸಾರ ಮಾಡಲಾಯಿತು. ಅದನ್ನು ಕ್ರೈಸ್ತ ಧರ್ಮೀಯರು ತಮ್ಮ ಮನೆಗಳಲ್ಲೇ ವೀಕ್ಷಿಸುತ್ತ ಆಚರಣೆ ಮಾಡಿದರು.

ಪ್ರತಿ ಬಾರಿ ಗುಡ್‌ಫ್ರೈಡೇಯಂದು ವಿವಿಧ 10 ಕಾರಣಗಳಿಗೆ‍ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆದರೆ, ಈ ಬಾರಿ 11ನೇ ಕಾರಣವಾಗಿ ಕೋವಿಡ್ 19 ಪೀಡಿತರ ಆರೋಗ್ಯ ವೃದ್ಧಿಗೆ, ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ನರ್ಸ್‌ಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಇತರ ಅಗತ್ಯ ಸೇವೆಯಲ್ಲಿ ತೊಡಗಿರುವವರ ಒಳಿತಿಗಾಗಿಯೂ ಪ್ರಾರ್ಥನೆ ಮಾಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT