ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆನ್‌ಲೈನ್‌ನಲ್ಲಿ ‘ಗುಡ್‌ ಫ್ರೈಡೇ’ ಆಚರಣೆ

ಲಾಕ್‌ಡೌನ್‌ಗೆ ಬಾಗಿಲು ಮುಚ್ಚಿದ ಚರ್ಚ್‌ಗಳು: ಪ್ರಾರ್ಥನೆ ಯೂಟ್ಯೂಬ್‌ನಲ್ಲಿ ಪ್ರಸಾರ
Last Updated 8 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕಾರವಾರ:ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನೇಕ ಧಾರ್ಮಿಕ ಆಚರಣೆಗಳನ್ನೂ ಬಾಧಿಸಿದೆ. ವಿವಿಧ ಜಾತ್ರೆಗಳು ರದ್ದಾಗಿದ್ದರೆ, ಮತ್ತೊಂದಷ್ಟನ್ನು ಮುಂದೂಡಲಾಗಿದೆ. ಅಂತೆಯೇ ಕ್ರೈಸ್ತ ಧರ್ಮೀಯರಿಗೆ ಅತ್ಯಂತ ಪವಿತ್ರವಾಗಿರುವ ‘ಶುಭ ಶುಕ್ರವಾರ’ದ(ಗುಡ್‌ ಫ್ರೈಡೇ) ಆಚರಣೆಯು ಆನ್‌ಲೈನ್ ಮೂಲಕ ನಡೆಯಲಿದೆ.

ಕೊರೊನಾ ವಿರುದ್ಧ ದೇಶದ ಹೋರಾಟವನ್ನುಬೆಂಬಲಿಸಿ ಈ ಬಾರಿಯ ಗುಡ್ ಫ್ರೈಡೇಯಂದು ಚರ್ಚ್‌ಗಳ ಬಾಗಿಲು ತೆರೆಯುವುದಿಲ್ಲ. ಹಾಗಾಗಿ ಕ್ರೈಸ್ತ ಧರ್ಮೀಯರು ತಮ್ಮ ಮನೆಗಳಲ್ಲೇ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು ಎಂದುಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಮನವಿ ಮಾಡಿದ್ದರು. ಅದರಂತೆ ವಿವಿಧಆಚರಣೆಗಳ ವಿಡಿಯೊಗಳು ಯೂಟ್ಯೂಬ್ ಮೂಲಕ ಪ್ರಸಾರವಾಗಲಿದೆ. ಅದನ್ನು ನೋಡುತ್ತ ಪ್ರಾರ್ಥನೆ ನೆರವೇರಿಸಲು ಸಿದ್ಧತೆ ನಡೆದಿದೆ.

ಮನೆಯಲ್ಲೇ ಹೇಗೆ ಆಚರಣೆ?:ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ನಗರದ ಸೇಂಟ್ ಜೋಸೆಫ್ ಪಿ.ಯು ಕಾಲೇಜಿನ ಪ್ರಾಂಶುಪಾಲ ಫಾದರ್ ಡಾ.ಸ್ಟ್ಯಾನಿ ಪಿಂಟೊ, ‘ಗುಡ್‌ ಫ್ರೈಡೇ ಅವಧಿಯಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರ ಮೂರೂ ದಿನಗಳ ಧಾರ್ಮಿಕ ಆಚರಣೆಗಳನ್ನು ಆನ್‌ಲೈನ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಇದರಲ್ಲಿ ಭಾಗವಹಿಸುವವರು ಚರ್ಚ್‌ನಲ್ಲಿರುವಷ್ಟೇ ಗಂಭೀರವಾಗಿ ಭಾಗವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಮನೆಯಲ್ಲಿ ಇದ್ದರೂ ಗುಡ್ ಫ್ರೈಡೇಆಚರಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಒಳ್ಳೆಯ ಉಡುಪು ಧರಿಸಿರಬೇಕು. ಟಿ.ವಿ, ಮೊಬೈಲ್ ಸ್ವಿಚ್ ಆಫ್ ಮಾಡಿರಬೇಕು. ಧರ್ಮಗುರುಗಳುಮಾರ್ಗದರ್ಶನದಲ್ಲಿ ಮೂರೂ ದಿನಗಳ ಆಚರಣೆಗಳನ್ನು ಮಾಡಬೇಕು’ ಎಂದು ತಿಳಿಸಿದರು.

‘ಆನ್‌ಲೈನ್ ಮೂಲಕ ವೀಕ್ಷಿಸಲು, ಆಚರಿಸಲು ಅವಕಾಶ ಇಲ್ಲದವರಿಗೆ ಪ್ರಾರ್ಥನೆಯ ಪುಸ್ತಕಗಳು ಸೇರಿದಂತೆ ಇತರಆರಾಧನಾ ಸಾಮಗ್ರಿಯನ್ನುನೀಡಲಾಗುತ್ತದೆ. ಅವುಗಳನ್ನು ಬಳಸಿಕೊಂಡು ಏಸುಕ್ರಿಸ್ತನ ಕೊನೆಯ ದಿನಗಳು ಮತ್ತು ಪುನರ್ ಅವತರಣದ ಸಂದರ್ಭಗಳನ್ನು ಆರಾಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಇಷ್ಟಾದರೂ ಸಾಧ್ಯವಾಗಿದೆ’:‘ಪ್ರತಿವರ್ಷದಂತೆ ಪ್ರಸಾದ ನೀಡುವ ಪದ್ಧತಿ ಹಾಗೂ ಮೆರವಣಿಗೆಈ ಬಾರಿ ಗುಡ್‌ ಫ್ರೈಡೇ ಆಚರಣೆಯ ಬಳಿಕ ಇರುವುದಿಲ್ಲ. ಮತ್ತೆಲ್ಲ ಆಚರಣೆಗಳನ್ನೂ ಆನ್‌ಲೈನ್ ಮೂಲಕ ನೋಡಿ ಪಾಲಿಸಬಹುದು. ಪ್ರಾರ್ಥನೆಯ ವೇಳೆಸ್ಥಳ ಮಹಿಮೆಯ ಭಾವನೆ ಬಾರದಿರಬಹುದು. ಆದರೆ, ಇಷ್ಟಾದರೂ ಮಾಡಲು ಸಾಧ್ಯವಾಗುತ್ತದೆಯಲ್ಲ ಎಂಬ ತೃಪ್ತಿ ಜನರದ್ದಾಗಿದೆ’ ಎಂದು ಹೇಳಿದರು.

*
ವಿಶ್ವವೇ ಆರೋಗ್ಯ ತುರ್ತಿನ ದಿನಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಚರ್ಚ್‌ಗೆ ಬಾರದಿರುವುದು ಪಾಪವಲ್ಲ. ಈ ಬಾರಿಯ ಗುಡ್‌ಫ್ರೈಡೇ ಅದರಿಂದ ಹೊರತಾಗಿದೆ.
-ಫಾದರ್ ಡಾ.ಸ್ಟ್ಯಾನಿ ಪಿಂಟೊ, ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT