ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ ದೇಗುಲ: ಮೇಲ್ವಿಚಾರಣಾ ಸಮಿತಿ ರಚಿಸಿ ಸರ್ಕಾರದ ಆದೇಶ

Last Updated 4 ಮೇ 2021, 16:09 IST
ಅಕ್ಷರ ಗಾತ್ರ

ಕಾರವಾರ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗೆ ಎಂಟು ಸದಸ್ಯರ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರವು ಮಂಗಳವಾರ ಆದೇಶಿಸಿದೆ. ಅಲ್ಲದೇ ಆಡಳಿತವನ್ನು ರಾಮಚಂದ್ರಾಪುರ ಮಠದಿಂದ ತಕ್ಷಣವೇ ವಶಕ್ಕೆ ಪಡೆದುಕೊಳ್ಳುವಂತೆ ಸಮಿತಿಗೆ ಸೂಚಿಸಿದೆ.

ದೇವಸ್ಥಾನದ ಆಡಳಿತ ನಿರ್ವಹಣೆ ವಿವಾದಕ್ಕೆ ಸಂಬಂಧಿಸಿದಂತೆ ಏ.19ರಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಅದರ ಪ್ರಕಾರ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲು ಸೂಚಿಸಿತ್ತು.

ಸಮಿತಿಯಲ್ಲಿ ಇರುವವರು:

ಬಿ.ಎನ್.ಶ್ರೀಕೃಷ್ಣ (ಅಧ್ಯಕ್ಷ), ಕುಮಟಾ ಉಪ ವಿಭಾಗಾಧಿಕಾರಿ (ಕಾರ್ಯದರ್ಶಿ), ಉತ್ತರ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸ್ಥಳೀಯ ಉಪಾಧಿವಂತರಾದ ದತ್ತಾತ್ರೇಯ ನಾರಾಯಣ ಭಟ್ಟ ಹಿರೇಗಂಗೆ, ಮಹಾಬಲ ಉಪಾಧ್ಯ, ತಜ್ಞರು ಮತ್ತು ವಿದ್ವಾಂಸರಾದ ಹೊಸ ಹೆರವಟ್ಟಾದ ಮುರಳೀಧರ ಪ್ರಭು, ಗೋಕರ್ಣದ ವಿದ್ವಾನ್ ಪರಮೇಶ್ವರ ಸುಬ್ರಹ್ಮಣ್ಯ ಭಟ್ಟ ಮಾರ್ಕಾಂಡೆ (ಸದಸ್ಯರು) ಅವರನ್ನು ಸಮಿತಿಗೆ ನೇಮಿಸಲಾಗಿದೆ.

ದೇವಸ್ಥಾನದ ಆಡಳಿತ, ಸ್ಥಿರ, ಚರ ಆಸ್ತಿಗಳನ್ನು ಕೂಡಲೇ ಹಸ್ತಾಂತರಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಪ್ರಕರಣದ ಇತ್ಯರ್ಥವಾಗುವ ತನಕವೂ ದೇವಸ್ಥಾನದ ಸಂಪೂರ್ಣ ವ್ಯವಹಾರಗಳನ್ನು ಸಮಿತಿಯೇ ನೋಡಿಕೊಳ್ಳಲಿದೆ.

ದೇಗುಲದ ಆಡಳಿತ ಹಸ್ತಾಂತರದ ಆದೇಶ ಪ್ರಕಟವಾದ ದಿನದಿಂದ 15 ದಿನಗಳಲ್ಲಿ ಸಮಿತಿಯನ್ನು ರಚಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಗಡುವು ಸೋಮವಾರಕ್ಕೆ ಅಂತ್ಯವಾಗಿತ್ತು. ಆದರೂ ಸಮಿತಿ ರಚನೆಯಾಗದ ಬಗ್ಗೆ ಶ್ರೀ ಕ್ಷೇತ್ರ ಗೋಕರ್ಣ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT