ಗುರುವಾರ , ಮೇ 26, 2022
30 °C

ಅಂಡಗಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಜ್ಜಿಯನ್ನು ಸೋಲಿಸಿದ ಮೊಮ್ಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ತಾಲ್ಲೂಕಿನ ಅಂಡಗಿ ಗ್ರಾಮ ಪಂಚಾಯಿತಿಯ ಕಿರವತ್ತಿ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಸಂಗೀತಾ ಗಣೇಶ ಚೆನ್ನಯ್ಯ ಗೆಲುವು ಸಾಧಿಸಿದ್ದಾರೆ.

 ಪ್ರತಿಸ್ಪರ್ಧಿ ಶಿವಕ್ಕ ಚಂದ್ರಪ್ಪ ಚೆನ್ನಯ್ಯ ಅವರನ್ನು ಅವರು 76 ಮತಗಳಿಂದ ಪರಾಭವಗೊಳಿಸಿದರು. ಸೋತ ಶಿವಕ್ಕ ಸಂಗೀತಾ ಅವರಿಗೆ ಸಂಬಂಧದಲ್ಲಿ ಅಜ್ಜಿಯಾಗಿದ್ದಾರೆ.

ಚಲಾವಣೆಯಾಗಿದ್ದ 415 ಮತಗಳ ಪೈಕಿ ಸಂಗೀತಾ 241 ಮತಗಳನ್ನು ಪಡೆದರೆ, ಶಿವಕ್ಕ 165 ಮತಗಳನ್ನು ಪಡೆದಿದ್ದರು. 9 ಮತಗಳು ತಿರಸ್ಕೃತಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು