ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಟಿ.ಯು ಕುಸ್ತಿ ಪಂದ್ಯಾವಳಿ: ಹಳಿಯಾಳ, ಚಿಕ್ಕಬಳ್ಳಾಪುರಕ್ಕೆ ಪ್ರಶಸ್ತಿ

Last Updated 17 ಡಿಸೆಂಬರ್ 2021, 16:27 IST
ಅಕ್ಷರ ಗಾತ್ರ

ಹಳಿಯಾಳ: ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ‘ವಿ.ಟಿ.ಯು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ’ಯಲ್ಲಿ ಪುರುಷರ ವಿಭಾಗದಲ್ಲಿ ಹಳಿಯಾಳದ ವಿ.ಡಿ.ಐ.ಟಿ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ಎಸ್.ಜೆ.ಐ.ಟಿ ಕಾಲೇಜು ‘ಸಮಗ್ರ ವೀರಾಗ್ರಣಿ’ ಪ್ರಶಸ್ತಿಗೆ ಭಾಜನವಾದವು.

ಪಟ್ಟಣದ ವಿಶ್ವನಾಥರಾವ್‍ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿ.18ರಂದು ಪಂದ್ಯಾವಳಿ ಆರಂಭವಾಗಿತ್ತು. ಪುರುಷರ 57 ಕೆ.ಜಿ. ವಿಭಾಗದಲ್ಲಿ ಹಳಿಯಾಳದ ಕೆ.ಎಲ್‌.ಎಸ್‌.ವಿ.ಡಿ.ಐ.ಟಿ.ಯ ಇಸ್ಮಾಯಿಲ್ ಪ್ರಥಮ ಸ್ಥಾನ ಪಡೆದರು.

ಫಲಿತಾಂಶ (ಪುರುಷರು)

61 ಕೆ.ಜಿ. ವಿಭಾಗ: ದೀಪಕ್‍.ಎಸ್ (ಎಸ್.ಜೆ.ಸಿ.ಐ.ಟಿ, ಚಿಕ್ಕಬಳ್ಳಾಪುರ) ಪ್ರಥಮ, ರಾಜೇಶ (ಕೆ.ಐ.ಟಿ ಮಂಗಳೂರು) ದ್ವಿತೀಯ ಮತ್ತು ಯತೀಶ.ಆರ್ (ಎಂ.ಐ.ಟಿ ಮೈಸೂರು) ದ್ವಿತೀಯ. 65 ಕೆ.ಜಿ: ರೋಹಿತ್‍.ಆರ್ (ಎನ್.ಎಚ್.ಸಿ.ಇ ಬೆಂಗಳೂರು) ಪ್ರಥಮ, ಗುರುಪ್ರಸಾದ.ಎಸ್ (ವಿ.ಡಿ.ಐ.ಟಿ ಹಳಿಯಾಳ) ದ್ವಿತೀಯ.

70 ಕೆ.ಜಿ: ಜೊನಾಥನ್‍.ಎಸ್ (ವಿ.ಡಿ.ಐ.ಟಿ ಹಳಿಯಾಳ) ಪ್ರಥಮ, ಮಝರ್ (ಎಸ್.ಟಿ.ಜಿಇ.ಸಿ) ದ್ವಿತೀಯ. 74 ಕೆ.ಜಿ: ಸಾತ್ವಿಕ್.ಪಿ (ಎನ್.ಎಂ.ಎ.ಎಂ.ಐ.ಟಿ ನಿಟ್ಟೆ) ಪ್ರಥಮ, ಸ್ವರಾಜ್.ಪಿ (ಎಸ್.ಸಿ.ಇ.ಎಂ.ಎಸ್) ದ್ವಿತೀಯ. 79 ಕೆ.ಜಿ: ಪವನ್‍ ಕುಮಾರ್ (ಎಂ.ಐ.ಟಿ ಮೈಸೂರು) ಪ್ರಥಮ, ಪವನಕುಮಾರ್ (ವಿ.ಡಿ.ಐ.ಟಿ ಹಳಿಯಾಳ) ದ್ವಿತೀಯ.

86 ಕೆ.ಜಿ: ಸಂಕಲ್ಪ.ವೈ (ಎಸ್.ಜಿ.ಬಿ.ಐ.ಟಿ) ಪ್ರಥಮ, ಅಭಿಷೇಕ.ಎ (ಜಿ.ಇ.ಸಿ ಕಾರವಾರ) ದ್ವಿತೀಯ. 92 ಕೆ.ಜಿ: ವರುಣ್.ವಿ (ಎಸ್.ಜೆ.ಸಿ.ಇ ಮೈಸೂರು) ಪ್ರಥಮ, ರಿತೀಶ್ ನಾಯ್ಕ (ವಿ.ಡಿ.ಐ.ಟಿ ಹಳಿಯಾಳ) ದ್ವಿತೀಯ. 97 ಕೆ.ಜಿ: ಅಖಿಲೇಶ (ವಿ.ಟಿ.ಯು ಮೈಸೂರು) ಪ್ರಥಮ, ಜೈನಾಲ್.ಎ (ಯೇನೆಪೋಯಾ ಕಾಲೇಜು ಮಂಗಳೂರು) ದ್ವಿತೀಯ. 97ರಿಂದ 125 ಕೆ.ಜಿ: ಚೇತನ್‍.ಎಂ (ಎಸ್.ಜೆ.ಸಿ.ಐ.ಟಿ) ಪ್ರಥಮ, ಕವಿತಾಂಜನ್ (ಎನ್.ಎಚ್.ಸಿ.ಇ ಬೆಂಗಳೂರು) ದ್ವಿತೀಯ.

ಮಹಿಳೆಯರು

50 ಕೆ.ಜಿ: ದಿವ್ಯಾ (ಡಿ.ಪಿ ವಿ.ಡಿ.ಐ.ಟಿ ಹಳಿಯಾಳ) ಪ್ರಥಮ, ಭೂಮಿಕಾ.ಜಿ (ಕೆ.ಐ.ಟಿ ಮಂಗಳೂರು) ದ್ವಿತೀಯ, 55 ಕೆ.ಜಿ: ಸೋನಿಯಾ.ಜೆ (ಎಸ್.ಜೆ.ಸಿ.ಐ.ಟಿ ಚಿಕ್ಕಬಳ್ಳಾಪುರ) ಪ್ರಥಮ, ನಿಹಾರಿಕಾ (ಬಿ.ಎಂ.ಎಸ್ ಬೆಂಗಳೂರು) ದ್ವಿತೀಯ.

57 ಕೆ.ಜಿ: ಜಾಸ್ಮಿನ್.ಕೆ (ಸರ್.ಎಂ.ವಿ.ಐ.ಟಿ ಬೆಂಗಳೂರು) ಪ್ರಥಮ, ಭುವನೇಶ್ವರಿ.ಎಂ (ವಿ.ಡಿ.ಐ.ಟಿ ಹಳಿಯಾಳ) ದ್ವಿತೀಯ, 59 ಕೆ.ಜಿ: ಚೈತನ್ಯ (ಆರ್‌.ಎನ್.ಎಂ.ಎ.ಎಂ.ಐ.ಟಿ ನಿಟ್ಟೆ) ಪ್ರಥಮ, ಚಂದನಾ (ಎಸ್.ಜೆ.ಸಿ.ಐ.ಟಿ ಚಿಕ್ಕಬಳ್ಳಾಪುರ) ದ್ವಿತೀಯ.

62 ಕೆ.ಜಿ: ಜಯಶ್ರೀ (ಆರ್‌.ಎನ್.ಎಂಎ.ಎಂ.ಐ.ಟಿ ನಿಟ್ಟೆ) ಪ್ರಥಮ, ಮಲ್ಲಾಪುರಂ.ಎಸ್ (ಎಸ್.ಜೆ.ಸಿ.ಐ.ಟಿ ಚಿಕ್ಕಬಳ್ಳಾಪುರ) ದ್ವಿತೀಯ. 65 ಕೆ.ಜಿ: ನಿರ್ಮಲಾ.ಎನ್ (ಎಸ್.ಜೆ.ಸಿ.ಐ.ಟಿ ಚಿಕ್ಕಬಳ್ಳಾಪುರ) ಪ್ರಥಮ, ಪೃಥ್ವಿರಾಣಿ (ಎನ್.ಎಂ.ಎ.ಎಂ.ಐ.ಟಿ ನಿಟ್ಟೆ) ದ್ವಿತೀಯ.

68 ಕೆ.ಜಿ: ನಾಗಮಣಿ (ಎಸ್.ಜೆ.ಸಿ.ಐ.ಟಿ ಚಿಕ್ಕಬಳ್ಳಾಪುರ) ಪ್ರಥಮ, ಅಪೇಕ್ಷಾ (ವಿ.ಡಿ.ಐ.ಟಿ ಹಳಿಯಾಳ) ದ್ವಿತೀಯ. 72 ಕೆ.ಜಿ: ಪ್ರಾಪ್ತಿ.ಎಂ (ಎನ್.ಎಂ.ಎ.ಎಂ.ಐ.ಟಿ ನಿಟ್ಟೆ) ಪ್ರಥಮ, ಅಂಜಲಿ.ಪಿ (ಜಿ.ಎಂ.ಐ.ಟಿ ದಾವಣಗೆರೆ). 76 ಕೆ.ಜಿ: ಹರ್ಷಿತಾ.ಎಲ್ (ಎಸ್.ಜೆ.ಸಿ.ಐ.ಟಿ ಚಿಕ್ಕಬಳ್ಳಾಪುರ) ಪ್ರಥಮ.

ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ, ರಾಷ್ಟ್ರಮಟ್ಟದ ಕುಸ್ತಿಪಟು ಹಳಿಯಾಳದ ಅರ್ಲವಾಡ ಗ್ರಾಮದ ಸಂಜು.ಎಸ್‍.ಅಣ್ಣಿಕೇರಿ ಅವರು ಪ್ರಶಸ್ತಿ ವಿತರಿಸಿದರು. ಪ್ರಾಂಶುಪಾಲ ಡಾ.ವಿ.ಎ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಪ್ರೊ.ಎಸ್.ಡಿ.ಕುಲಕರ್ಣಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರಿಯಾ ಮತ್ತು ಮಾನಸ್ ಕಾರ್ಯಕ್ರ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಗದಿಗೆಪ್ಪಾ ಯಳ್ಳೂರ್ ವಂದಿಸಿದರು. ಮಹಾವಿದ್ಯಾಲಯದ ಆಡಳಿತ ವಿಭಾಗ ಮುಖ್ಯಸ್ಥ ಪ್ರೊ.ಮಂಜುನಾಥ ಡಿ., ಡಾ.ಆರ್‌.ಎಸ್.ಮುನ್ನೊಳ್ಳಿ, ಡಾ. ಮಹೇಂದ್ರ ದೀಕ್ಷಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT