12 ಗ್ರಾಂ ಚಿನ್ನದಲ್ಲಿ ಮೂಡಿದ ಹಂಪಿಯ ಕಲ್ಲಿನ ರಥ!

7

12 ಗ್ರಾಂ ಚಿನ್ನದಲ್ಲಿ ಮೂಡಿದ ಹಂಪಿಯ ಕಲ್ಲಿನ ರಥ!

Published:
Updated:
Deccan Herald

ಕಾರವಾರ: ತಾಲ್ಲೂಕಿನ ಕಡವಾಡದ ಮಿಲಿಂದ್ ಅಣ್ವೇಕರ್ ಅವರು ಕೇವಲ 12 ಗ್ರಾಂ ಚಿನ್ನದಲ್ಲಿ ಹಂಪಿಯ ಕಲ್ಲಿನ ರಥದ ಮಾದರಿಯನ್ನು ತಯಾರಿಸಿ ಗಮನ ಸೆಳೆದಿದ್ದಾರೆ. ಇದು ಒಂದು ಇಂಚು ಉದ್ದ, ಒಂದೂವರೆ ಇಂಚು ಅಗಲವಿದೆ.

ಇದಕ್ಕೆ ಅವರು 916 ಹಾಲ್‌ಮಾರ್ಕ್ ಚಿನ್ನವನ್ನು ಬಳಕೆ ಮಾಡಿದ್ದಾರೆ. ಈ ಹಿಂದೆ ಒಂದು ಗ್ರಾಂಗಿಂತ ಕಡಿಮೆ (0.960 ಗ್ರಾಂ) ಚಿನ್ನದಲ್ಲಿ ‘ತೆಂಡೂಲ್ಕರ್ ಚೈನ್’ ತಯಾರಿಸಿ ಲಿಮ್ಕಾ ದಾಖಲೆ ಮಾಡಿದ್ದರು. ಇದಾದ ನಂತರದಲ್ಲಿ ತಿರುಗುವ ಪೆಂಡೆಂಟ್, 1.3 ಸೆಂ.ಮೀ. ಚಿನ್ನದ ಫ್ಯಾನ್, ಎಂಟು ಗ್ರಾಂ ಉಂಗುರದ ಮೇಲೆ ತಾಜ್ ಮಹಲ್, ಕಟ್ಟಿಗೆಯಲ್ಲಿ ಬಂಗಾರದ ಪೆಂಡೆಂಟ್ ತಯಾರಿಸಿದ್ದರು.

‘ಚಿನ್ನದಲ್ಲಿ ಕೆತ್ತನೆಗಳನ್ನು ಮಾಡುವುದು ನನ್ನ ಹವ್ಯಾಸ. ಅದರಂತೆ ಈ ಬಾರಿ ಹಂಪಿಯ ರಥದ ಮಾದರಿಯನ್ನು ತಯಾರಿಸಿದ್ದೇನೆ. ಈ ಬಾರಿ ರಾಜ್ಯಮಟ್ಟದ ಪ್ರಶಸ್ತಿಗಾಗಿ ಪ್ರಯತ್ನಿಸುತ್ತಿದ್ದೇನೆ’ ಎಂದು ಮಿಲಿಂದ್ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !