ಕುಂಬಾರವಾಡಾದಲ್ಲಿ ಆರೋಗ್ಯ ಶಿಬಿರ

ಶನಿವಾರ, ಏಪ್ರಿಲ್ 20, 2019
32 °C

ಕುಂಬಾರವಾಡಾದಲ್ಲಿ ಆರೋಗ್ಯ ಶಿಬಿರ

Published:
Updated:
Prajavani

ಕಾರವಾರ: ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ಗ್ರಾಮದಲ್ಲಿ ಈಚೆಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿತ್ತು. ಧಾರವಾಡದ ಶ್ರೀ ಸೈಕ್ಯಾಟ್ರಿಕ್ ಸೆಂಟರ್, ಸ್ಪಂದನಾ ಆಸ್ಪತ್ರೆ ಹಾಗೂ ಜೊಯಿಡಾ ತಾಲ್ಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಯಿತು.

ನೂರಾರು ಮನೋರೋಗಿಗಳು, ಹೃದ್ರೋಗ, ಮಧುಮೇಹಿಗಳು ಭಾಗವಹಿಸಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡರು. ಮನೋವೈದ್ಯ ಡಾ.ಆನಂದ ಪಾಂಡುರಂಗಿ, ಹೃದ್ರೋಗ, ಮಧುಮೇಹ ತಜ್ಞ ಡಾ.ಆರ್.ಸಿ.ಧೂಳಪ್ಪನವರ ಭಾಗವಹಿಸಿದ್ದರು. ಕುಣಬಿ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಜಯಾನಂದ ಡೇರೇಕರ್ ಹಾಗೂ ಪದಾಧಿಕಾರಿಗಳು ಈ ಶಿಬಿರವನ್ನು ಸಂಘಟಿಸಿದ್ದರು. ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿ ಡಾ.ಆನಂದ ಪಾಂಡುರಂಗಿ, ‘ಮನುಷ್ಯ ಹಣ, ಕಾರು, ಬಂಗಲೆ ಸೇರಿದಂತೆ ಎಲ್ಲ ತರಹದ ಐಷಾರಾಮಿ ವಸ್ತುಗಳನ್ನು ಗಳಿಸಬಹುದು. ಆದರೆ, ಇದನ್ನೆಲ್ಲ ಅನುಭವಿಸಲು ಉತ್ತಮ ಆರೋಗ್ಯವೇ ಇಲ್ಲದಿದ್ದರೆ ಎಲ್ಲವೂ ವ್ಯರ್ಥ’ ಎಂದರು.

ಡಾ.ಆರ್.ಸಿ.ಧೂಳಪ್ಪನವರ ಮಾತನಾಡಿ, ‘ಭಾರತ ಈಗ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯಕ್ಕೆ ಸಂಬಂಧಿತ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿವೆ. ಇಂತಹ ಉಚಿತ ಶಿಬಿರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಕಾಡಿನಲ್ಲಿರುವ ಕುಣಬಿ ಸೇರಿದಂತೆ ಎಲ್ಲ ಬುಡಕಟ್ಟು ಸಮುದಾಯದ ಜನರಿಗೆ ಆರೋಗ್ಯದ ಅರಿವು ಕಡಿಮೆ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅವರಿಗೆ ವರದಾನ’ ಎಂದು ಅಭಿಪ್ರಾಯಪಟ್ಟರು.

ಸಂಘದ ಗೌರವಾಧ್ಯಕ್ಷ ದಯಾನಂದ ಗಾವಡಾ, ಡಾ.ಆದಿತ್ಯ ಪಾಂಡುರಂಗಿ, ಡಾ.ಸ್ವಪ್ನಾ ಪಾಂಡುರಂಗಿ, ಸಾಯಿನಾಥ ಧೋಂಗಡಿ, ಸಂಘದ ಕಾರ್ಯದರ್ಶಿ ಅಶೋಕ ಮಿರಾಶಿ, ಕುಣಬಿ ಸಮಾಜದ ಯುವ ಘಟಕದ ಅಧ್ಯಕ್ಷ ಉಮೇಶ ಗಾವಡಾ, ಜಯಂತ ಗಾವಡಾ, ವಿಷ್ಣು ಡೇರೇಕರ್, ಅಖಿಲ್ ಡೇರೇಕರ್, ದೀಪಕ್, ಯೋಗೀಶ ಡೇರೇಕರ್, ಮನೋಜ ಡೇರೇಕರ್ ಇದ್ದರು. ರವಿ ಡೇರೇಕರ್ ಕಾರ್ಯಕ್ರಮ ನಿರೂಪಿಸಿದರು. ಜಯಂತ ಗಾವಡಾ ವಂದಿಸಿದರು.

300ಕ್ಕೂ ಹೆಚ್ಚು ಜನರು ಉಚಿತ ತಪಾಸಣೆ ಮಾಡಿಸಿಕೊಂಡು ಔಷಧಗಳನ್ನು ಪಡೆದರು. ತಾಲ್ಲೂಕಿನ 51 ಹಳ್ಳಿಗಳ ಗ್ರಾಮಸ್ಥರು ಭಾಗವಹಿಸಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !