ಬನವಾಸಿಯಲ್ಲಿ ಆಲಿಕಲ್ಲು ಮಳೆ

ಭಾನುವಾರ, ಏಪ್ರಿಲ್ 21, 2019
32 °C
ಮಳೆ–ಗಾಳಿ: ನೆಲಕಚ್ಚಿದ ಬಾಳೆ, ಜೋಳ

ಬನವಾಸಿಯಲ್ಲಿ ಆಲಿಕಲ್ಲು ಮಳೆ

Published:
Updated:
Prajavani

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ಬುಧವಾರ ಸಂಜೆ ಅರ್ಧ ತಾಸು ಕಾಲ ಆಲಿಕಲ್ಲು ಮಳೆ ಸುರಿಯಿತು. ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆಯಿತು. ಈ ಭಾಗದಲ್ಲಿ ಮೂರು ದಿನಗಳಿಂದ ನಿತ್ಯ ಸಂಜೆ ಮಳೆಯಾಗುತ್ತಿದೆ.

ಸೋಮವಾರ ಸುರಿದ ಗಾಳಿ–ಮಳೆಗೆ ಹೊಸಕೊಪ್ಪ ಸಮೀಪ 11 ಕೆ.ವಿ ಮಾರ್ಗದಲ್ಲಿ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಬನವಾಸಿ ಯಲ್ಲಿ 13 ಕಂಬಗಳಿಗೆ ಹಾನಿಯಾಗಿತ್ತು. 

ಬೆಳೆಹಾನಿ

ಬನವಾಸಿ ಹೋಬಳಿಯಲ್ಲಿ ಸೋಮವಾರ ಬೀಸಿದ ಗಾಳಿ ಯಿಂದ ಕಟ್ಟಡ ಹಾಗೂ ಕೃಷಿ ಬೆಳೆಗಳು ಸೇರಿ ₹ 8 ಲಕ್ಷ ಹಾನಿ ಅಂದಾಜಿಸಲಾಗಿದೆ.

ಐದು ಎಕರೆ ಬಾಳೆ ತೋಟ, 45 ಎಕರೆ ಜೋಳದ ಗದ್ದೆ ನೆಲಕಚ್ಚಿದೆ. ಕಂದಾಯ ಇಲಾಖೆ ಸಿಬ್ಬಂದಿ ಕ್ಷೇತ್ರ ಭೇಟಿ ನೀಡಿ, ಹಾನಿಯ ಅಂದಾಜು ಲೆಕ್ಕ ಹಾಕುತ್ತಿದ್ದಾರೆ. ಹೊಸಕೊಪ್ಪದ ನಾಗರಾಜ ಚೆನ್ನಯ್ಯ ಅವರ ಮನೆ ಹಾನಿಯಾಗಿ ₹ 75ಸಾವಿರ ನಷ್ಟ, ಬನವಾಸಿಮನೆಯ ಜೈರಾಬಿ ಶಿಕ್ಕಲಗಾರ ಅವರ ಮನೆ ಹಾನಿಯಿಂದ ₹ 10ಸಾವಿರ, ಗಣೇಶ ಪೂಜಾರ ಅವರ ಮನೆಯ ಚಾವಣಿ ಹಾರಿ ₹ 20ಸಾವಿರ ನಷ್ಟ ಸಂಭವಿಸಿದೆ. ಬನವಾಸಿ ನಾಡಕಚೇರಿಯ ಮೇಲ್ಚಾವಣಿ, ಸೋಲಾರ್ ಪ್ಯಾನಲ್ ಬೋರ್ಡ್‌ಗೆ ಧಕ್ಕೆಯಾಗಿ ₹ 20ಸಾವಿರ ನಷ್ಟವಾಗಿದೆ ಎಂದು ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !