ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಯಲ್ಲಿ ಮಳೆ: ಮಾರಿಕಾಂಬಾ ದೇವಿ ಜಾತ್ರೆ ಅಸ್ತವ್ಯಸ್ತ

Last Updated 18 ಮಾರ್ಚ್ 2022, 13:55 IST
ಅಕ್ಷರ ಗಾತ್ರ

ಶಿರಸಿ: ನಗರವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಬಿರುಸಿನ ಮಳೆ ಸುರಿಯುತ್ತಿದೆ. ಏಕಾಏಕಿ ಸುರಿಯಲಾರಂಭಿಸಿದ ಮಳೆಯಿಂದಾಗಿ ಮಾರಿಕಾಂಬಾ ದೇವಿ ಜಾತ್ರೆಪೇಟೆಯಲ್ಲಿ ಅಸ್ತವ್ಯಸ್ತ ಉಂಟಾಗಿದೆ.

ದೇವಿ ಗದ್ದುಗೆಯ ಎದುರು ಜಾತ್ರೆ ವೇಳೆ ನಿರ್ಮಿಸಿದ ಮುಂಭಾಗದ ಮಂಟಪದ ಗೋಪುರ ಗಾಳಿಯ ರಭಸಕ್ಕೆ ಕಳಚಿ ಬಿದ್ದಿದೆ. ಮಂಟಪದ ಒಳಭಾಗದಲ್ಲಿ ದೇವಿದರ್ಶನಕ್ಕೆ ಕಾದಿದ್ದ ಭಕ್ತರನ್ನು ಮುನ್ನೆಚ್ಚರಿಕೆಗಾಗಿ ಹೊರಕ್ಕೆ ಕಳಿಸಲಾಯಿತು.

ಸಂಜೆ 5.50ರ ಸುಮಾರಿಗೆ ಜೋರಾದ ಗಾಳಿ ಬೀಸುವ ಜತೆಗೆ ಮಳೆ ಸುರಿಯಲಾರಂಭಿಸಿತು. ತಾತ್ಕಾಲಿಕ ಅಂಗಡಿಮುಂಗಟ್ಟುಗಳ ಚಾವಣಿ ಹಾರಿಬಿದ್ದವು. ಸಿಹಿ ತಿನಿಸು, ಬಟ್ಟೆ, ಆಟಿಕೆ ಸಾಮಗ್ರಿಗಳು ನೀರು ಪಾಲಾದವು. ನೂರಾರು ಜನರು ಅಂಗಡಿಗಳು, ಕಟ್ಟಡಗಳ ಆಶ್ರಯಿಸಿದರು.

ಗ್ರಾಮೀಣ ಭಾಗದಲ್ಲೂ ಬಿರುಸಿನ ಮಳೆ ಸುರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT