ಸೋಮವಾರ, ಆಗಸ್ಟ್ 10, 2020
22 °C

ಶಿರಸಿಯಲ್ಲಿ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಪ್ರಾರಂಭವಾದ ಮಳೆ, ಮಂಗಳವಾರ ಬಿರುಸಿನಿಂದ ಸುರಿಯಿತು. ಆಗಾಗ ಸಣ್ಣ ಬಿಡುವಿನೊಂದಿಗೆ ದಿನವಿಡೀ ಧಾರಾಕಾರ ಮಳೆಯಾಯಿತು.

ಸಮರ್ಪಕ ಚರಂಡಿಯಿಲ್ಲದ ಕಾರಣ ನಗರದ ಯಲ್ಲಾಪುರ ನಾಕಾ ಸಮೀಪ ಆಶಾ ಪ್ರಭು ಆಸ್ಪತ್ರೆಯ ಎದುರು ರಾಜ್ಯ ಹೆದ್ದಾರಿಯ ಮೇಲೆ ನೀರು ನಿಂತಿದೆ. ಈ ನೀರಿನಲ್ಲೇ ವಾಹನಗಳು ಸಾಗುತ್ತಿವೆ. ಕೋವಿಡ್ 19 ಭಯದಿಂದ ಜನರು ಮನೆಯಿಂದ ಹೊರಬರುವುದು ಕಡಿಮೆಯಾಗಿದೆ. ಮಳೆಯೂ ಇದ್ದ ಕಾರಣ ಜನಸಂಚಾರ ಇನ್ನಷ್ಟು ವಿರಳವಾಗಿತ್ತು. ಹಗಲಿನಲ್ಲೂ ವಾಹನ ಸವಾರರು ಲೈಟ್‌ ಹಾಕಿಕೊಂಡು ವಾಹನ ಓಡಿಸುವುದು ಕಂಡುಬಂತು. ದಿನವಿಡೀ ಮೋಡ ಕವಿದ ವಾತಾವರಣದಿಂದ ಮೈ ಕೊರೆಯುವ ಚಳಿಯ ಅನುಭವವಾಗುತ್ತಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.