ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಅಪಪ್ರಚಾರ ಕಾಂಗ್ರೆಸ್‌ನ ಬಂಡವಾಳ: ಶಿವರಾಮ ಹೆಬ್ಬಾರ್

ದಾಸನಕೊಪ್ಪದಲ್ಲಿ ರೋಡ್ ಶೋ ನಡೆಸಿದ ಹೆಬ್ಬಾರ್
Last Updated 1 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಶಿರಸಿ: ‘ವೈಯಕ್ತಿಕ ಅಪಪ್ರಚಾರ ಹಾಗೂ ಆಮಿಷದ ರಾಜಕಾರಣ ಇವೆರಡೇ ಕಾಂಗ್ರೆಸ್ ಪಕ್ಷಕ್ಕಿರುವ ಬಂಡವಾಳ. ಚುನಾವಣೆ ಮುನ್ನಾದಿನ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಕಾಂಗ್ರೆಸ್ಸಿಗರು ಮಾಡುತ್ತಾರೆ. ಹಾಗಾಗಿ ಮತದಾರರು ಎಚ್ಚರಿಕೆಯಿಂದ ಇರಬೇಕು’ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದರು.

ತಾಲ್ಲೂಕಿನ ದಾಸನಕೊಪ್ಪದಲ್ಲಿ ಭಾನುವಾರ ಆಯೋಜಿಸಿದ್ದ ರೋಡ್ ಶೋ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್, ಬಿಜೆಪಿ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದರೂ, ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಪ್ರಚಾರಕ್ಕಿಳಿದಿದ್ದಾರೆ. ಚುನಾವಣೆಯ ಅಂತಿಮ ಘಟ್ಟದಲ್ಲಿ, ಬಿಜೆಪಿಗೆ ಪೂರಕ ವಾತಾವರಣ ಇರುವುದು ಸ್ಪಷ್ಟವಾಗಿದೆ ಎಂದರು.

‘ಗಣ್ಯರ ಜತೆಗಿನ ಹನಿಟ್ರ್ಯಾಪ್ ಪ್ರಕರಣ ಬೋಗಸ್ ಕಾರ್ಯಕ್ರಮವಾಗಿದೆ. ಚುನಾವಣೆ ಅಂತಿಮ ಹಂತದಲ್ಲಿ ಇಂಥ ಅಪಪ್ರಚಾರಗಳೆಲ್ಲ ಸಾಮಾನ್ಯ. ಅಪಪ್ರಚಾರ ಮಾಡುವವರಿಗೆ ಅಡ್ಡಿಪಡಿಸುವುದಿಲ್ಲ. ಹನಿಟ್ರ್ಯಾಪ್ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುತ್ತಿರುವುದು ಅಪಪ್ರಚಾರವೇ ಹೊರತು ಬೇರೇನೂ ಅಲ್ಲ. ಚುನಾವಣೆ ಅಂತಿಮ ಘಟ್ಟದಲ್ಲಿರುವಾಗ ಇಂಥ ಅಪಪ್ರಚಾರಗಳು ನಿರೀಕ್ಷಿತ. ಕಳೆದ ಮೂರು ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಅಪಪ್ರಚಾರ ಎದುರಿಸಿದ್ದೇನೆ. ನೂರಾರು ಅಪಪ್ರಚಾರದ ಸವಾಲುಗಳನ್ನು ಹೊಟ್ಟೆಯಲ್ಲಿಟ್ಟು ರಾಜಕಾರಣ ಮಾಡಿದ್ದೇನೆ. ನಾಲ್ಕು ದಶಕಗಳ ರಾಜಕೀಯ ಬದುಕಿನಲ್ಲಿ ಇಂಥ ಅಪಪ್ರಚಾರ ಹೊಸದಲ್ಲ’ ಎಂದು ಹೇಳಿದರು.

ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ನಟರಾಜ ಹೊಸೂರು, ಭೈರವ ಕಾಮತ್, ರಾಜು ಗೌಡ, ವಿರೂಪಾಕ್ಷ ಕಲ್ಮಟ್ಲೇರ, ಪ್ರಶಾಂತ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT