ಮಂಗಳವಾರ, ಆಗಸ್ಟ್ 9, 2022
23 °C
ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯಲ್ಲಿ ಒತ್ತಾಯ

ಶಿರಸಿ: ಕನ್ನಯ್ಯ ಹಂತಕರನ್ನು ಗಲ್ಲಿಗೇರಿಸಲು ಹಿಂದೂಪರ ಸಂಘಟನೆಗಳಿಂದ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೇಲರ್‌ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜನಜಾಗೃತಿ ಸಮಿತಿ ಶಿರಸಿ ಘಟಕದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಹಳೇ ಬಸ್ ನಿಲ್ದಾಣದಲ್ಲಿ ಸೇರಿದ ಕಾರ್ಯಕರ್ತರು ಕೆಲವು ನಿಮಿಷ ಪ್ರತಿಭಟಿಸಿದರು‌. ಕೊಲೆಗಡುಕರ ಮೇಲೆ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸಿ ಉಪವಿಭಾಗಾಧಿಕಾರಿ ದೇವರಾಜ ಆರ್. ಅವರಿಗೆ ಮನವಿ ಸಲ್ಲಿಸಲಾಯಿತು.

ಹಿಂದೂ ಜಾಗರಣ ವೇದಿಕೆಯ ಗೋಪಾಲ ದೇವಾಡಿಗ ಮಾತನಾಡಿ, ‘ಅಮಾಯಕ ಹಿಂದೂವಿನ ಹತ್ಯೆ ದೇಶವೇ ಒಕ್ಕೊರಲಿನಿಂದ ಖಂಡಿಸಬೇಕಿದೆ. ಕೊಲೆಗಡುಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು’ ಎಂದರು.

ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್ ಮಾತನಾಡಿ, ‘ಟೇಲರ್ ಹತ್ಯೆ ಜಿಹಾದಿ ಮಾದರಿಯ ಕೃತ್ಯವಾಗಿದೆ. ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು’ ಎಂದು ಒತ್ತಾಯಿಸಿದರು.

ಸಂಧ್ಯಾ ಕುರ್ಡೇಕರ್ ಮಾತನಾಡಿ, ‘ರಾಜಸ್ಥಾನದಲ್ಲಿ ಭದ್ರತಾ ವ್ಯವಸ್ಥೆ ಸರಿಯಾಗಿಲ್ಲ ಎಂಬುದು ಕನ್ಹಯ್ಯ ಹತ್ಯೆಯಿಂದ ಸಾಬೀತಾಗಿದೆ. ದೇಶದ್ರೋಹಿಗಳನ್ನು ದೇಶದಿಂದ ಹೊರಗಟ್ಟಬೇಕು’ ಎಂದರು.

ಸಚ್ಚಿದಾನಂದ ಹೆಗಡೆ ಮಾತನಾಡಿ, ‘ನೂಪುರ್ ಶರ್ಮ ನೆಪ ಇಟ್ಟು ವಿದ್ರೋಹಿಗಳಿಗೆ ಬೆಂಬಲಿಸುತ್ತಿರುವ ಪ್ರಗತಿಪರರ ಕೆಲಸ ಮೂರ್ಖತನದ ಪರಮಾವಧಿ. ಹಿಂದೂ ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು. ವಿಶ್ವ ಹಿಂದೂ ಪರಿಷತ್‌ನ ಪ್ರಾಂತ್ಯ ಪ್ರಮುಖ ಗಂಗಾಧರ ಹೆಗಡೆ, ವಿಠ್ಠಲ ಪೈ ಮಾತನಾಡಿದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಶ್ರೀನಿವಾಸ ಹೆಬ್ಬಾರ, ಬಿಜೆಪಿ ಮುಖಂಡರಾದ ಚಂದ್ರು ಎಸಳೆ, ರಾಜೇಶ ಶೆಟ್ಟಿ, ಗುರುಪ್ರಸಾದ ಹೆಗಡೆ, ನಾಗರಾಜ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು