ಸಹಿಯಿಂದಲೇ ಪ್ರಸಿದ್ಧರಾದ ಶಾಂತಯ್ಯ!

7

ಸಹಿಯಿಂದಲೇ ಪ್ರಸಿದ್ಧರಾದ ಶಾಂತಯ್ಯ!

Published:
Updated:
Deccan Herald

ಕಾರವಾರ: ಹೊನ್ನಾವರದ ಉಪ ನೋಂದಣಾಧಿಕಾರಿ ಶಾಂತಯ್ಯ ತಮ್ಮ ಸಹಿಯ ವಿಶಿಷ್ಟ ಶೈಲಿಯಿಂದಾಗಿಯೇ ಪ್ರಸಿದ್ಧರಾಗಿದ್ದಾರೆ. ಸರ್ಕಾರಿ ಕಡತಗಳ ಮೇಲೆ ಅವರು ಮಾಡಿದ ಸಹಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ನೆಲಮಂಗಲದವರಾದ ಅವರ ಪೂರ್ಣ ಹೆಸರು ಕಂಬಾಳು ಸೋಮಪುರ ಶಾಂತಯ್ಯ. ಅವರು ಸಹಿಯಲ್ಲಿ ಕೆ.ಎಸ್.ಶಾಂತಯ್ಯ ಎಂದು ಅಚ್ಚಕನ್ನಡದಲ್ಲಿ ಬರೆಯುತ್ತಾರೆ. ಆದರೆ, ಅದನ್ನು ಗಮನಿಸಿದರೆ ಒಂದುಕ್ಷಣ ದಂಗಾಗುವುದು ಖಂಡಿತ. ಒಂದು ಸಹಿ ಮಾಡಲು ಅವರು ಸುಮಾರು ಒಂದು ನಿಮಿಷ ತೆಗೆದುಕೊಳ್ಳುತ್ತಾರೆ. 

1994ರಿಂದ ಶಾಂತಯ್ಯ ಈ ರೀತಿ ಸಹಿ ಮಾಡುವುದನ್ನು ರೂಢಿಸಿಕೊಂಡರಂತೆ. ಅವರ ಸಹಿಯ ಶೈಲಿಯನ್ನು ಮೆಚ್ಚಿದ್ದ ಹೈಕೋರ್ಟ್ ನ್ಯಾಯಾಧೀಶರೊಬ್ಬರು, ಜಿಲ್ಲಾ ನೋಂದಣಾಧಿಕಾರಿ ಮೂಲಕ ತಮ್ಮ ಮನೆಗೆ ಕರೆಸಿಕೊಂಡು ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದೂ ಹೇಳುತ್ತಾರೆ.

ಟ್ರೋಲ್ ಆದ ಸಹಿ: ಶಾಂತಯ್ಯ ಅವರ ಸಹಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಕೂಡ ಆಗಿದೆ. ಅವರ ಸಹಿಯನ್ನು ಯುನೆಸ್ಕೊ ‘ವಿಶ್ವದ ಅತ್ಯುತ್ತಮ ಸಹಿ’ ಎಂದು ಘೋಷಿಸಿದೆ ಎಂದು, ಸ್ಪ್ರಿಂಗ್ ಸುತ್ತಿಕೊಂಡರೆ ಹೀಗಿರುತ್ತದೆ. ಈ ಸಹಿಯನ್ನು ಯಾರಿಗೂ ನಕಲು ಮಾಡಲು ಸಾಧ್ಯವೇ ಇಲ್ಲ ಎಂದೆಲ್ಲಾ ಕಿಚಾಯಿಸಿದ್ದಾರೆ. ಆದರೆ, ಇವುಗಳಿಗೆಲ್ಲ ಬೇಸರಿಸಿಕೊಳ್ಳದ ಅವರು, ತಮ್ಮ ಹವ್ಯಾಸವನ್ನು  ಮುಂದುವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !