ತೋಟಗಾರಿಕಾ ಬೆಳೆ ರಕ್ಷಣೆಗೆ ಮಾಹಿತಿ, ಉಪಬೆಳೆ ಬೆಳೆಯಲು ಸಲಹೆ

ಮಂಗಳವಾರ, ಜೂನ್ 18, 2019
27 °C

ತೋಟಗಾರಿಕಾ ಬೆಳೆ ರಕ್ಷಣೆಗೆ ಮಾಹಿತಿ, ಉಪಬೆಳೆ ಬೆಳೆಯಲು ಸಲಹೆ

Published:
Updated:
Prajavani

ಶಿರಸಿ: ಮಳೆಗಾಲ ಮುಂಚಿತವಾಗಿ ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಇಲ್ಲಿನ ಹಾರ್ಟಿ ಕ್ಲಿನಿಕ್ ರೈತರಿಗೆ ಕೆಲವು ಸಲಹೆಗಳನ್ನು ನೀಡಿದೆ.

ಈ ವರ್ಷ ಬೇಸಿಗೆಯ ಅತಿಯಾದ ಉಷ್ಣಾಂಶದಿಂದಾಗಿ ಗೇರು ಮತ್ತು ಮಾವು ಬೆಳೆಗಳ ಹೂವುಗಳು ಸುಟ್ಟಂತಾಗಿ ಬೆಳೆ ಕಡಿಮೆಯಾಗಿದೆ. ಅಡಿಕೆಗೆ ಸಿಂಗಾರ ಡೈಬ್ಯಾಕ್ ರೋಗ, ಬಂಜೆ ಸಿಂಗಾರ ಮತ್ತು ಬಂಜೆ ಹೂ ಉತ್ಪತ್ತಿಯಾಗಿ ಸಿಂಗಾರ ಒಣಗುವ ಪ್ರಮಾಣ ಜಾಸ್ತಿಯಾಗಿರುವುದು ಹೆಚ್ಚಿನ ತೋಟಗಳಲ್ಲಿ ಕಂಡು ಬಂದಿದೆ. ಆದ್ದರಿಂದ ರೈತರು ಮಳೆಗಾಲದಲ್ಲಿ ತೋಟದಲ್ಲಿ ಬಾಳೆ, ಸೂಜಿಮೆಣಸು, ಸುವರ್ಣಗಡ್ಡೆ, ಕಾಳುಮೆಣಸು, ಶುಂಠಿ, ಅರಿಶಿನ ಇತ್ಯಾದಿ ಉಪ ಬೆಳೆಗಳನ್ನು ತೋಟಗಳ ಪರಿಸ್ಥಿತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು, ಬೆಳೆಯುವುದರ ಮೂಲಕ ಆರ್ಥಿಕ ನಷ್ಟವನ್ನು ಕಡಿಮೆಗೊಳಿಸಿಕೊಳ್ಳಬಹುದು. 

ಮುಂಗಾರಿನ ಅವಧಿಯಲ್ಲಿ ಕಡಿಮೆ ಮಳೆ ಸುರಿಯುವ ಮತ್ತು ಮಳೆಗಾಲದ ಪ್ರಾರಂಭ ತಡವಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ, ಬೇಸಿಗೆಯಲ್ಲಿ ಕಂಡು ಬಂದಿರುವ ರೋಗ-ಕೀಟಗಳನ್ನು ನಿಯಂತ್ರಿಸುವುದು ಮತ್ತು ಮಳೆಗಾಲದ ಪೂರ್ವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಅಡಿಕೆ ಗಿಡಗಳ ಎಲೆಗಳಿಗೆ ಮೈಟ್ಸ್‌ ಕೀಟ ಸಮಸ್ಯೆ ಕಂಡು ಬಂದಲ್ಲಿ ಡಿಕೋಪಾಲ್ 2.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಅಡಿಕೆಯಲ್ಲಿ ಎಲೆ ತುದಿಯಿಂದ ಒಣಗುವ ರೋಗ (ಲೀಪ್ ಬ್ಲೈಟ್) ಕಂಡುಬಂದಲ್ಲಿ ಕಾರ್ಬೆಂಡೆಂಜಿಂ 2 ಗ್ರಾಂ ಮತ್ತು ಮ್ಯಾಂಕೋಜೆಬ್ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಾಳುಮೆಣಸು ಬಳ್ಳಿಯಲ್ಲಿ ಹೊಸ ಕರೆಗಳು ಹೊರಡಲು ಪ್ರಾರಂಭವಾಗಿದ್ದರೆ, ಮಳೆಗಾಲ ಪ್ರಾರಂಭವಾಗುವವರೆಗೂ ನೀರಾವರಿ ಮುಂದುವರಿಸಬೇಕು. ಕಾಳುಮೆಣಸಿನ ಬಳ್ಳಿಯನ್ನು ಆಧಾರವಾಗಿರುವ ಮರಕ್ಕೆ ಕಟ್ಟಿ, ಬುಡಕ್ಕೆ ಮಣ್ಣೇರಿಸಬೇಕು. ಮಾವು ಮತ್ತು ಗೇರಿನ ಗಿಡಗಳಲ್ಲಿ ಕೊಯ್ಲಿನ ನಂತರ ಅನಗತ್ಯ ಟೊಂಗೆಗಳನ್ನು ಕತ್ತರಿಸಿ ತೆಗೆದು ಬೋರ್ಡೋ ಪೇಸ್ಟ್‌ ಹಚ್ಚಬೇಕು. ಮಳೆಗಾಲದ ಪ್ರಾರಂಭದಲ್ಲಿ ಎಲ್ಲ ಬೆಳೆಗಳಿಗೆ ಶಿಫಾರಸು ಮಾಡಿದ ಗೊಬ್ಬರಗಳನ್ನು ಹಾಕಬೇಕು ಎಂದು ಹಾರ್ಟಿ ಕ್ಲಿನಿಕ್‌ನ ವಿಷಯ ತಜ್ಞ ವಿ.ಎಂ.ಹೆಗಡೆ ತಿಳಿಸಿದ್ದಾರೆ. 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !