ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಬೆಂಕಿ: ₹ 60 ಲಕ್ಷ ಹಾನಿಯ ಅಂದಾಜು

Last Updated 22 ಫೆಬ್ರುವರಿ 2020, 14:12 IST
ಅಕ್ಷರ ಗಾತ್ರ

ಹೊನ್ನಾವರ:ತಾಲ್ಲೂಕಿನ ಇಡಗುಂಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಳಗಿನ ಇಡಗುಂಜಿಯಲ್ಲಿ ಪುರಾತನಮನೆಯೊಂದು ಶುಕ್ರವಾರ ಮಧ್ಯರಾತ್ರಿಯ ನಂತರ ಬೆಂಕಿಗೆ ಆಹುತಿಯಾಗಿದೆ.

ಈ ಮನೆಯಲ್ಲಿಕನ್ನೆ ಹನ್ಮಂತ ಗೌಡ, ಅಣ್ಣಯ್ಯ ಸಣ್ಕೂಸ ಗೌಡ, ಮಂಜು ಸಣ್ಕೂಸ ಗೌಡ ಹಾಗೂ ಗಣಪಯ್ಯ ಸಾತ ಗೌಡ ಎಂಬುವವರನಾಲ್ಕುಕುಟುಂಬಗಳು ವಾಸವಾಗಿದ್ದವು. ಮನೆಯಲ್ಲಿದ್ದವರು ಗಾಢನಿದ್ದೆಯಲ್ಲಿದ್ದಾಗ ಮನೆಗೆ ಬೆಂಕಿ ತಗುಲಿತು. ಒಳಗಿದ್ದ ಎಲ್ಲರೂ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂರು ಅಂತಸ್ತಿನ ಈಮನೆಯ ಚಾವಣಿ ಹುಲ್ಲಿನದ್ದಾಗಿತ್ತು. ಮರದ ಹಲಗೆಯ ಅಂಕಣಗಳು ಹಾಗೂ ಸುತ್ತಮುತ್ತಲಿನ ಚಾವಣಿಗಳಿಗೆ ಹೆಂಚು ಹೊದಿಸಲಾಗಿತ್ತು.

‘ಬೆಂಕಿಗೆ ನಿಖರ ಕಾರಣ ತಿಂದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಊಹಿಸಲಾಗಿದೆ. ಬಂಗಾರದ ಒಡವೆ, ಬಟ್ಟೆ, ಅಡಿಕೆ ಸೇರಿದಂತೆ ಸುಮಾರು ₹ 60 ಲಕ್ಷ ರೂಪಾಯಿಯ ಆಸ್ತಿಪಾಸ್ತಿಗೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಹಾನಿಯ ಸಮೀಕ್ಷೆ ನಡೆಸಿದ ಕಂದಾಯ ಅಧಿಕಾರಿ ಇಸ್ಮಾಯಿಲ್ ಖಾನ್ ತಿಳಿಸಿದರು.

ಶಾಸಕ ಸುನೀಲ ನಾಯ್ಕ, ಕಾಂಗ್ರೆಸ್ ಮುಖಂಡ ಮಂಕಾಳ ಎಸ್.ವೈದ್ಯ ಸ್ಥಳಕ್ಕೆ ಭೇಟಿ ನೀಡಿ, ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT