‌ಆನಂದ ಅಸ್ನೋಟಿಕರ್‌ಗೆ ಒಂದು ಲೋಡ್ ಪಕ್ಷಗಳನ್ನು ತಂದುಕೊಡುವೆ: ವೆಂಕಟ್ರಮಣ ಹೆಗಡೆ

ಗುರುವಾರ , ಏಪ್ರಿಲ್ 25, 2019
21 °C

‌ಆನಂದ ಅಸ್ನೋಟಿಕರ್‌ಗೆ ಒಂದು ಲೋಡ್ ಪಕ್ಷಗಳನ್ನು ತಂದುಕೊಡುವೆ: ವೆಂಕಟ್ರಮಣ ಹೆಗಡೆ

Published:
Updated:

ಕಾರವಾರ: 'ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರಿಗೆ ಈ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಸೇರಲು ಕರ್ನಾಟಕದಲ್ಲಿ ಯಾವುದೇ ಪಕ್ಷವಿಲ್ಲ. ಹೀಗಾಗಿ, ಉತ್ತರ ಭಾರತದಿಂದ ಒಂದು ಲೋಡ್ ಪಕ್ಷವನ್ನು ಅವರಿಗಾಗಿ ನೀಡಲು ಸಿದ್ಧನಿದ್ದೇನೆ' ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಮಾಧ್ಯಮ ಸಹ ಸಂಚಾಲಕ ವೆಂಕಟ್ರಮಣ ಹೆಗಡೆ ವ್ಯಂಗ್ಯವಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ಆನಂದ ಅತಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಧುಮುಕಿದವರು. ಆದರೆ, ಈ ವಯಸ್ಸಿನಲ್ಲೇ ರಾಜ್ಯದಲ್ಲಿರುವ ಎಲ್ಲ ಪಕ್ಷಗಳಿಗೂ ಪಕ್ಷಾಂತರ ಮಾಡಿ ಬಂದಿದ್ದಾರೆ. ಹೀಗಾಗಿ, ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಸೇರಲು ಯಾವುದೇ ಪಕ್ಷ ರಾಜ್ಯದಲ್ಲಿಲ್ಲ. ನಾನೊಬ್ಬ ಟ್ರಾನ್ಸ್ ಪೋರ್ಟ್ ಉದ್ಯಮಿಯಾಗಿರುವುದರಿಂದ ಸ್ವಂತ ಖರ್ಚಿನಲ್ಲಿ ಉತ್ತರ ಭಾರತದಿಂದ ಪಕ್ಷಗಳ ಲೋಡ್ ಅನ್ನು ಇಲ್ಲಿಗೆ ತರುತ್ತೇನೆ. ಆ ಮೂಲಕ ಅವರಿಗೆ ಪಕ್ಷ ಸೇರಲು ಸಹಾಯ ಮಾಡುತ್ತೇನೆ' ಎಂದು ಕಾಲೆಳೆದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ಮಾತನಾಡಿ, 'ಆನಂದ ಅಸ್ನೋಟಿಕರ್ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಬೋಪಯ್ಯ ಅವರು ಎಂಟು ತಿಂಗಳು ಅನರ್ಹಗೊಳಿಸಿದ್ದರು. ಈ ವೇಳೆ ಕಾರವಾರ- ಅಂಕೋಲಾ ಕ್ಷೇತ್ರದ ಜನರು ಶಾಸಕರಿಲ್ಲದೇ ಕಷ್ಟಗಳನ್ನು ಅನುಭವಿಸಿದ್ದಾರೆ. ಹೀಗೆ ಕ್ಷೇತ್ರದ ಜನತೆಗೆ ಶಾಸಕನಾಗಿ ಸಮಸ್ಯೆ ನೀಡಿದವರು ಆನಂದ ಅಸ್ನೋಟಿಕರ್ ಒಬ್ಬರೇ' ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 4

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !