ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ: ₹ 21.22 ಲಕ್ಷದ ಅಕ್ರಮ ಮದ್ಯ ನಾಶ

Last Updated 10 ಜೂನ್ 2020, 12:37 IST
ಅಕ್ಷರ ಗಾತ್ರ

ಕಾರವಾರ: ಒಟ್ಟು 85 ಅಬಕಾರಿ ಪ‍್ರಕರಣಗಳಲ್ಲಿ ಜಪ್ತಿ ಮಾಡಲಾದ3,320ಲೀಟರ್ ಮದ್ಯ, 3,338ಲೀಟರ್ ಫೆನ್ನಿ ಹಾಗೂ 630 ಲೀಟರ್ ಬಿಯರ್ ಅನ್ನು ಅಧಿಕಾರಿಗಳು ಬುಧವಾರ ನಾಶಪಡಿಸಿದರು. ಇವುಗಳು ಅಂದಾಜು ₹ 21.22 ಲಕ್ಷಮೊತ್ತದ್ದಾಗಿವೆ.

ತಾಲ್ಲೂಕಿನ ಮಾಜಾಳಿಯ ಅಬಕಾರಿ ತನಿಖಾ ಠಾಣೆಯ ಹತ್ತಿರದ ಅರಣ್ಯ ಪ್ರದೇಶದಲ್ಲಿಮದ್ಯವನ್ನು ನಾಶ ಮಾಡಲಾಯಿತು. ಗೋವಾ ಗಡಿಯಿಂದ ರಾಜ್ಯದೊಳಗೆ ಅಕ್ರಮವಾಗಿ ತರಲಾದ ಮದ್ಯದ ಬಾಟಲಿಗಳನ್ನು ಇಲ್ಲಿ ಜಪ್ತಿ ಮಾಡಿ ಇಡಲಾಗಿತ್ತು. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಣೆಯಾದ ಸಂದರ್ಭದಲ್ಲಿ ಕೂಡ ಅತಿಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಹಲವು ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದ್ದರೆ, ಉಳಿದವುಗಳಲ್ಲಿ ಪತ್ತೆಯಾಗಿಲ್ಲ.

ಮದ್ಯ ನಾಶದ ಸಂದರ್ಭದಲ್ಲಿಅಬಕಾರಿ ಇಲಾಖೆ ಉಪ ಆಯುಕ್ತ ವೈ.ಆರ್.ಮೋಹನ್, ತಹಶಿಲ್ದಾರ್ ಆರ್.ವಿ.ಕಟ್ಟಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT