₹ 12 ಲಕ್ಷ ಮೌಲ್ಯದ ಮದ್ಯ ವಶ: ಇಬ್ಬರ ಬಂಧನ

7

₹ 12 ಲಕ್ಷ ಮೌಲ್ಯದ ಮದ್ಯ ವಶ: ಇಬ್ಬರ ಬಂಧನ

Published:
Updated:
Deccan Herald

ಕಾರವಾರ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 12 ಲಕ್ಷಕ್ಕೂ ಅಧಿಕ ಮೌಲ್ಯದ ಗೋವಾ ಮದ್ಯವನ್ನು ರಾಜ್ಯ ಅಬಕಾರಿ ಇಲಾಖೆ ಅಧಿಕಾರಿಗಳು ಜೊಯಿಡಾ ತಾಲ್ಲೂಕಿನ ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯ ಸಚಿನ್ ಲಕ್ಷ್ಮಣ ಅಟ್ಕೆ (32) ಹಾಗೂ ಉಸ್ಮಾನಾಬಾದ್‌ನ ಅಮರ್ ಪ್ರಕಾಶ್ ಯಾದ್ಗೆ (32) ಬಂಧಿತರು.

‘ಲಾರಿಯ ಚಾಲಕನ ಹಿಂದೆ ಸರಕು ತುಂಬುವ ಜಾಗದಲ್ಲಿ ಸುರಂಗದ ಮಾದರಿಯ ವಿನ್ಯಾಸ ಮಾಡಿ ಅದರಲ್ಲಿ ಮದ್ಯದ ಬಾಟಲಿಗಳ ಪೆಟ್ಟಿಗೆಗಳನ್ನು ಇಡಲಾಗಿತ್ತು. ಅದು ಲಾರಿಯ ಮಧ್ಯಭಾಗದಲ್ಲಿತ್ತು. ಅದರ ಹಿಂದೆ ಮತ್ತು ಮುಂದೆ ಬೆಳ್ಳುಳ್ಳಿ ಚೀಲಗಳನ್ನು ಹೇರಲಾಗಿತ್ತು. ಆರೋಪಿಗಳು ಗೋವಾದಿಂದ ಅನಮೋಡ ಮೂಲಕ ಖಾನಾಪುರದತ್ತ ಸಾಗಿ ಮಹಾರಾಷ್ಟ್ರಕ್ಕೆ ಹೋಗುವವರಿದ್ದರು’ ಎಂದು ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ ಮಾಹಿತಿ ನೀಡಿದರು.

ಲಾರಿಯಲ್ಲಿ 1,641 ಲೀಟರ್ (190 ಬಾಕ್ಸ್) ಗೋವಾ ಮದ್ಯ, ಎಂ.ಸಿ.ವಿಸ್ಕಿ, ಬ್ರಾಂಡಿ, ಇಂಪೀರಿಯಲ್ ಬ್ಲೂ ಇತ್ತು.
ಆರೋಪಿಗಳು ಚಲಾಯಿಸುತ್ತಿದ್ದ ಲಾರಿಯನ್ನೂ ವಶಕ್ಕೆ ಪಡೆಯಲಾಗಿದ್ದು, ಅದು ಅಂದಾಜು ₹ 12 ಲಕ್ಷ ಬೆಲೆ ಬಾಳುತ್ತದೆ ಎಂದು ಅವರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !