ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಎಚ್ಚರಿಕೆ

7

ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಎಚ್ಚರಿಕೆ

Published:
Updated:
Deccan Herald

ಕಾರವಾರ: ‘ಬೈತಖೋಲ ಅಂಚೆ ಕಚೇರಿಯಲ್ಲಿ ಖಾತೆದಾರರು ಠೇವಣಿ ಇಟ್ಟಿದ್ದ ಸುಮಾರು ₹ 80 ಲಕ್ಷವನ್ನು ಅಲ್ಲಿನ ಸಿಬ್ಬಂದಿಯೊಬ್ಬರು ಒಂದು ವರ್ಷದ ಹಿಂದೆ ಅಕ್ರಮವಾಗಿ ಬಳಸಿಕೊಂಡಿದ್ದರು. ಆದರೆ, ಖಾತೆದಾರರಿಗೆ ಹಣ ಇನ್ನೂ ಸಿಕ್ಕಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು, ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು’ ಎಂದು ಖಾತೆದಾರರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಬಳಿಕ ಸಮಾಜ ಸೇವಕ ವಿಲ್ಸನ್ ಸಂತ್ಯಾಗ ಫರ್ನಾಂಡೀಸ್ ಮಾತನಾಡಿದರು.

‘ಅಂಚೆ ಕಚೇರಿಯ ಸಿಬ್ಬಂದಿ ಲಕ್ಷ್ಮಣ ಗೋವಿಂದ ನಾಯ್ಕ ಎಂಬುವವರು ನಕಲಿ ಪಾಸ್‌ಬುಕ್‌ಗಳನ್ನು ಬಳಸಿ ಮೋಸ ಮಾಡಿದ್ದ ವಿಚಾರ ಕಳೆದ ವರ್ಷ ಜೂನ್ 21ರಂದು ಬೆಳಕಿಗೆ ಬಂದಿತ್ತು. ಅವರನ್ನು ಕಾರವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದಾಗಿ ಒಂದು ವರ್ಷವೇ ಕಳೆದರೂ ಖಾತೆದಾರರಿಗೆ ಹಣ ಸಿಕ್ಕಿಲ್ಲ’ ಎಂದು ದೂರಿದರು. 

‘ಹಣ ಯಾವಾಗ ಸಿಗುತ್ತದೆ ಎಂದು ಕೇಳಿದರೆ ಇಲಾಖೆಯ ಹಿರಿಯ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಕೂಲಿ ಮಾಡಿ ಸಿಕ್ಕಿದ್ದ ಹಣವನ್ನು ಠೇವಣಿ ಇಟ್ಟಿದ್ದವರು ಈಗ ಚಿಂತಿತರಾಗಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಖಾತೆದಾರರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಸ್ಥಳೀಯರಾದ ನಾಗೇಶ ಮಹಾದೇವ, ಮೋಹನ ಮಹಾದೇವ, ಬಿ.ಮಂಜುನಾಥ, ಸಿದ್ದಮ್ಮ ಮಹಾದೇವ ಅವರೂ ಈ ಸಂದರ್ಭದಲ್ಲಿ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !