ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಿ ಪಟ್ಟಣ ಪಂಚಾಯಿತಿ: ಪಕ್ಷೇತರರ ಮೇಲುಗೈ, ಕಾಂಗ್ರೆಸ್ 4, ಬಿ.ಜೆ.ಪಿ 3ರಲ್ಲಿ ಜಯ

Last Updated 30 ಡಿಸೆಂಬರ್ 2021, 6:28 IST
ಅಕ್ಷರ ಗಾತ್ರ

ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿಯ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ಪೂರ್ಣಗೊಂಡಿದ್ದು, 20 ವಾರ್ಡ್‌ಗಳ ಪೈಕಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಹಾಗೂ 13ರಲ್ಲಿ ಪಕ್ಷೇತರ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಇದರಿಂದ ಈ ಬಾರಿ ಪಕ್ಷೇತರರೇ ಜಾಲಿ ಪಟ್ಟಣ ಪಂಚಾಯಿತಿ ಆಡಳಿತ ನಡೆಸುವುದು ಖಚಿತವಾಗಿದೆ.

ವಾರ್ಡ್ ನಂ.1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಮೊಗೇರ (315) ಪ್ರತಿಸ್ಫರ್ಧಿ ಪುರಂದರ ಮೊಗೇರ ಪಕ್ಷೇತರ(156), ವಾರ್ಡ್ ನಂ.2ರಲ್ಲಿ ಬಿಜೆಪಿ ಅಭ್ಯರ್ಥಿ ಪದ್ಮಾವತಿ ನಾಯ್ಕ(184) ಪ್ರತಿಸ್ಫರ್ಧಿ ಸಾವಿತ್ರಿ ನಾಯ್ಕ ಕಾಂಗ್ರೆಸ್ (180), ವಾರ್ಡ್ ನಂ.3ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ ನಾಯ್ಕ (511) ಪ್ರತಿಸ್ಫರ್ಧಿ ಬಾಲಚಂದ್ರ ನಾಯ್ಕ ಬಿಜೆಪಿ (373), ವಾರ್ಡ್ ನಂ..4ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಹಿನಾ ಶೇಖ್ (170) ಪ್ರತಿಸ್ಫರ್ಧಿ ರೇಣುಕಾ ನಾಯ್ಕ (160), ವಾರ್ಡ್ ನಂ. 6ರಲ್ಲಿ ಪಕ್ಷೇತರ ಅಭ್ಯರ್ಥಿ ಮಿಸ್ಬಾ ಹುಲ್ ಹಕ್ ಉಮರ್ (187) ಪ್ರತಿಸ್ಫರ್ಧಿ ಮೊಹಿದ್ದೀನ್ ಪಕ್ಷೇತರ (179), ವಾರ್ಡ್ ನಂ.8ರಲ್ಲಿ ಬಿಜೆಪಿ ಅಭ್ಯರ್ಥಿ ಲೀಲಾವತಿ ಗಣಪತಿ ಆಚಾರಿ (400) ಪ್ರತಿಸ್ಫರ್ಧಿ ಯೋಗರಾಜ್ ಜೈನ್ ಕಾಂಗ್ರೆಸ್ (95), ವಾರ್ಡ್ ನಂ 9ರಲ್ಲಿ ಬಿಜೆಪಿ ಅಭ್ಯರ್ಥಿ ದಯಾನಂದ ನಾಯ್ಕ (212) ಪ್ರತಿಸ್ಪರ್ಧಿ ಅಬ್ದುಲ್ ಅಜೀಜ್ ಕಾಂಗ್ರೆಸ್ (122), ವಾರ್ಡ್ ನಂ 10ರಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ ನಾಯ್ಕ (311) ಪ್ರತಿಸ್ಫರ್ಧಿ ರಾಮ ನಾಯ್ಕ, ಬಿಜೆಪಿ (225), ವಾರ್ಡ್ ನಂ 11ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮೇಶ ಗೊಂಡ (411) ಪ್ರತಿಸ್ಫರ್ಧಿ ಈಶ್ವರ ಗೊಂಡ, ಬಿಜೆಪಿ (262), ವಾರ್ಡ್ ನಂ.14ರಲ್ಲಿ ಪಕ್ಷೇತರ ಅಭ್ಯರ್ಥಿ ಮೋಮಿನ್ ಶೈನಾಜ್ ಶೇಖ್ (256) ಪ್ರತಿಸ್ಫರ್ಧಿ ನೇತ್ರಾ ನಾಯ್ಕ ಕಾಂಗ್ರೆಸ್ (114), ವಾರ್ಡ್ ನಂ.18ರಲ್ಲಿ ಪಕ್ಷೇತರ ಅಭ್ಯರ್ಥಿ ವಸೀಂ ಅಹ್ಮದ್ ಮನೆಗಾರ (209) ಪ್ರತಿಸ್ಫರ್ಧಿ ಕೆ.ಸುಲೆಮಾನ್ , ಪಕ್ಷೇತರ (28), ವಾರ್ಡ್ ನಂ.19ರಲ್ಲಿ ಪಕ್ಷೇತರ ಅಭ್ಯರ್ಥಿ ಮಹ್ಮದ್ ತೌಫಿಕ್ ಬ್ಯಾರಿ (333) ಪ್ರತಿಸ್ಫರ್ಧಿ ಅತಾವುಲ್ಲಾ ಹಿರೂರು ಪಕ್ಷೇತರ (270), ವಾರ್ಡ್ ನಂ.20ರಲ್ಲಿ ಪಕ್ಷೇತರ ಅಭ್ಯರ್ಥಿ ಇರ್ಫಾನ್ ಅಹ್ಮದ್ (419) ಪ್ರತಿಸ್ಫರ್ಧಿ ಇರ್ಫಾನ್ ಅಹ್ಮದ್ ಪಕ್ಷೇತರ (67) ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.

ಜಿದ್ದಾಜಿದ್ದಿನ ಕಣವಾಗಿದ್ದ ವಾರ್ಡ್‌9ರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರೆ, ವಾರ್ಡ್ ನಂ. 6ರಲ್ಲಿ ತಂಝೀಂ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 13 ವಾರ್ಡ್‌ಗಳಲ್ಲಿ 72 ಜನರು ನೋಟಾ ಮತದಾನ ಮಾಡಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತಯೇ ಶ್ರೀ ಗುರು ಸುಧೀಂದ್ರ ಕಾಲೇಜಿನ ಹೊರಗೆ ಇದ್ದ ಅಭ್ಯರ್ಥಿಗಳ ಬೆಂಬಲಿಗರು ಕುಣಿದು ಸಂಭ್ರಮಿಸಿದರು. ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಬಂದೊಬಸ್ತ್ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT