ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸಂಶೋಧನಾ ಪ್ರಬಂಧಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

Last Updated 21 ನವೆಂಬರ್ 2021, 16:25 IST
ಅಕ್ಷರ ಗಾತ್ರ

ಶಿರಸಿ: ಸ್ತ್ರೀಯರ ಲೈಂಗಿಕ ಆರೋಗ್ಯದ ಕುರಿತು ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಯೂ ಆಗಿರುವ ಮೂತ್ರಜನಕಾಂಗ ತಜ್ಞ ಡಾ.ಗಜಾನನ ಭಟ್ ನೇತೃತ್ವದ ತಂಡ ಮಂಡಿಸಿದ ಪ್ರಬಂಧಕ್ಕೆ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿದೆ.

ನ.19 ರಂದು ಟೋಕಿಯೋದಲ್ಲಿ ನಡೆದಿದ್ದ ವಿಶ್ವ ಲೈಂಗಿಕ ತಜ್ಞರ ಸಮ್ಮೇಳನದಲ್ಲಿ ಈ ಪ್ರಬಂಧವನ್ನು ಐ.ಎಸ್.ಎಸ್.ಎಂ. (ಅಂತರಾಷ್ಟ್ರೀಯ ಲೈಂಗಿಕರೋಗ ಚಿಕಿತ್ಸಕರ ಸಂಘ) ಅತ್ಯುತ್ತಮ ಸಂಶೋಧನಾ ಪ್ರಬಂಧಗಳಲ್ಲಿ ಒಂದು ಎಂದು ಪರಿಗಣಿಸಿ ಪ್ರಮಾಣ ಪತ್ರ ನೀಡಿದ್ದು, 2.5 ಸಾವಿರ ಡಾಲರ್ ಬಹುಮಾನ ಮೊತ್ತ ಘೋಷಿಸಿದೆ.

ಒಟ್ಟೂ ಏಳು ಜನರನ್ನು ಒಳಗೊಂಡ ಈ ತಂಡ ಈವರೆಗೆ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಈವರೆಗೆ 23 ಸಂಶೋಧನಾ ಪ್ರಬಂಧ ಮಂಡಿಸಿದೆ. ಡಾ.ಅನುರಾಧಾ ಶಾಸ್ತ್ರಿ ಅವರು ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT