ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಹೊರಕ್ಕೆ: ಹೊನ್ನಾವರದ ಹಳ್ಳಿಗಳು ಜಲಾವೃತ

7

ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಹೊರಕ್ಕೆ: ಹೊನ್ನಾವರದ ಹಳ್ಳಿಗಳು ಜಲಾವೃತ

Published:
Updated:

ಹೊನ್ನಾವರ: ಲಿಂಗನಮಕ್ಕಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹರಿಸುತ್ತಿರುವ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತದ ಸೊಬಗು ಇಮ್ಮಡಿಸಿದೆ. ನಯಾಗರ ಜಲಪಾತದಂತೆ ಧಾರೆಯಾಗಿ ಧುಮ್ಮಿಕ್ಕುವ ಜೋಗವನ್ನು ನಿತ್ಯ ಲಕ್ಷಾಂತರ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.

ಆದರೆ, ಅಣೆಕಟ್ಟಿನಿಂದ ಬಿಟ್ಟಿರುವ ನೀರಿನಿಂದ ಹೊನ್ನಾವರ ತಾಲ್ಲೂಕಿನ ಅನೇಕ ಹಳ್ಳಿಗರು ಬವಣೆಪಡುತ್ತಿದ್ದಾರೆ. ಹೊಳೆಯಂಚಿನ ಹಳ್ಳಿಗಳು ಜಲಾವೃತಗೊಂಡಿವೆ. ಮಾಗೋಡ, ಕುದ್ರಗಿ, ಸಂಶೀ, ಕೊಡಾಣಿ, ಬೇರಂಕಿ ಮೊದಲಾದ ಊರುಗಳ ತೋಟದಲ್ಲಿರುವ ಅಡಿಕೆ ಮರಗಳು ಅರ್ಧ ಕಾಣುತ್ತಿವೆ. ಭತ್ತದ ಗದ್ದೆಗಳು ನೀರಿನಡಿಯಾಗಿವೆ. ತಗ್ಗಿನಲ್ಲಿರುವ ಕೆಲವು ಮನೆಗಳಿಗೆ ತೊಂದರೆಯಾಗಿದೆ. ಮಕ್ಕಳಿಗೆ ನೀರಾಟವಾದರೆ, ಹಿರಿಯರಿಗೆ ಬೆಳೆ ಹಾಳಾಗುವ ಸಂಕಟ.
***
ಇದನ್ನೂ ಓದಿರಿ..
ಕಬಿನಿಯಿಂದ 75 ಸಾವಿರ ಕ್ಯುಸೆಕ್ ನೀರು ಬಿಡುಗಡೆ: ನಂಜನಗೂಡು ಮುಳುಗಡೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !