ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರಾ ಪ್ಲಾಟು:₹6.20 ಲಕ್ಷಕ್ಕೆ ಜಾಗ ಹರಾಜು

Last Updated 4 ಮಾರ್ಚ್ 2022, 16:28 IST
ಅಕ್ಷರ ಗಾತ್ರ

ಶಿರಸಿ: ಮಾರಿಕಾಂಬಾ ದೇವಿ ಜಾತ್ರೆಗೆ ಕೋಣನಬಿಡ್ಕಿ ಸಮೀಪದ ಜಾಗ ಹರಾಜು ಪ್ರಕ್ರಿಯೆ ಶುಕ್ರವಾರ ನಡೆದಿದ್ದು 3 ಮತ್ತು 4ನೇ ಪ್ಲಾಟುಗಳು ಮಾತ್ರ ಹರಾಜುಗೊಂಡವು.

ಪ್ರಭು ಪೆಟ್ರೋಲ್ ಬಂಕಿನ ಪಕ್ಕದ ಸ್ಥಳದಲ್ಲಿರುವ ನಾಲ್ಕನೇ ಪ್ಲಾಟನ್ನು ಉದ್ಯಮಿಯೊಬ್ಬರು ₹6.20 ಲಕ್ಷಕ್ಕೆ ಹರಾಜಿನಲ್ಲಿ ಪಡೆದುಕೊಂಡರು. ಇದೇ ಉದ್ಯಮಿ ಮಿರ್ಜಾನಕರ ಪೆಟ್ರೋಲ್ ಬಂಕ್ ಪಕ್ಕದ ಮೂರನೇ ಪ್ಲಾಟನ್ನೂ ₹4.74 ಲಕ್ಷಕ್ಕೆ ಪಡೆದರು. ಇವೆರಡೂ ಪ್ಲಾಟುಗಳಿಗೆ ₹3.50 ಲಕ್ಷ ಹರಾಜು ದರ ನಿಗದಿಪಡಿಸಲಾಗಿತ್ತು.

ದೇವಿಯ ಜಾತ್ರಾ ಗದ್ದುಗೆ ಸಮೀಪ ಜಾತ್ರೆ ವೇಳೆ ಮಳಿಗೆಗಳ ಸ್ಥಾಪನೆಗೆ ದೇವಸ್ಥಾನದ ಆಡಳಿತ ಮಂಡಳಿ ನಾಲ್ಕು ಪ್ಲಾಟುಗಳನ್ನು ವಿಂಗಡಿಸಿ ಹರಾಜು ನಡೆಸುತ್ತಿದೆ. ಗದ್ದುಗೆ ಸಮೀಪದಲ್ಲಿರುವ 1 ಮತ್ತು 2ನೇ ಪ್ಲಾಟುಗಳ ಹರಾಜು ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಇವೆರಡೂ ಪ್ಲಾಟುಗಳಿಗೆ ಕ್ರಮವಾಗಿ ₹32 ಲಕ್ಷ, ₹27 ಲಕ್ಷ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT