ಸೋಮವಾರ, ಡಿಸೆಂಬರ್ 9, 2019
24 °C

ಹಣ ಕೊಟ್ಟು ಮತ ಕೇಳಲಾರೆ: ಚೈತ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡಿದ್ದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಅವರು, ಪಕ್ಷದ ಪರ ಕೆಲಸ ಮಾಡಲು ಪದಾಧಿಕಾರಿಗಳು ಹಣ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷರು ಪ್ರತಿ ಬೂತ್‌ಗೆ ₹ 10ಸಾವಿರ ಬೇಡಿಕೆ ಇಟ್ಟಿರುವ, ಮತದಾನದ ದಿನ ಬೂತ್‌ನಲ್ಲಿ ಕೆಲಸ ಮಾಡಲು ಹಣ ಕೊಡುವಂತೆ ಚೈತ್ರಾ ಗೌಡ ಅವರ ಬಳಿ ಕೇಳಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ತೆಗೆದು ಹಾಕಿದ್ದರೆ ಪಕ್ಷಕ್ಕೆ ಹಾನಿಯಾಗುತ್ತಿರಲಿಲ್ಲ. ಹಣ ಕೇಳಿರುವ ಕೆಲವರು ಕಾಂಗ್ರೆಸ್, ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ನೇರವಾಗಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ನನ್ನ ಬಳಿ ಕೆಲವರು ಹಣ ಕೇಳಿದ್ದು ನಿಜ. ಹಣಕೊಟ್ಟು ಮತ ಕೇಳುವ ವಿಚಾರ ನನ್ನಲ್ಲಿ ಇಲ್ಲ’ ಎಂದು ಚೈತ್ರಾ ಗೌಡ ಪ್ರತಿಕ್ರಿಯಿಸಿದ್ದಾರೆ. 

ಪ್ರತಿಕ್ರಿಯಿಸಿ (+)