ಮಂಗಳವಾರ, ಡಿಸೆಂಬರ್ 7, 2021
23 °C

ನೌಕಾನೆಲೆ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನೌಕಾನೆಲೆಯ ಸಿ ಮತ್ತು ಡಿ ದರ್ಜೆಯ ಸಿಬ್ಬಂದಿ ನೇಮಕಾತಿಯಲ್ಲಿ ಯೋಜನೆಗೆ ನಿರಾಶ್ರಿತವಾದ ಕುಟುಂಬಗಳ ಯುವಕರಿಗೆ ಆದ್ಯತೆ ನೀಡಬೇಕು. ಈ ಸಂಬಂಧ ನೌಕಾನೆಲೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬೇಕು’ ಎಂದು ಸೀಬರ್ಡ್ ನಿರಾಶ್ರಿತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.

‘2019ರ ಆಗಸ್ಟ್‌ನಲ್ಲಿ ಕಾರವಾರದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಸೀಬರ್ಡ್ ಯೋಜನೆಯ ನಿರಾಶ್ರಿತರ ಕುಟುಂಬಗಳ ಯುವಕರಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಅಂತೆಯೇ ನಿರಾಶ್ರಿತ ಕುಟುಂಬಗಳ ಯುವಕರ ಮಾಹಿತಿ ಸಂಗ್ರಹಿಸಿದ್ದ ಕಂದಾಯ ಇಲಾಖೆಯು, ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಮಾಡಿಸಿತ್ತು. ಆದರೆ, ಈಗ ನೌಕಾನೆಲೆಯಲ್ಲಿ ನೇಮಕಾತಿ ಸಂದರ್ಭದಲ್ಲಿ ಈ ಯುವಕರನ್ನು ಕಡೆಗಣಿಸಲಾಗುತ್ತಿದೆ’ ಎಂದು ದೂರಿದ್ದಾರೆ.

‘ಈ ಯುವಕರಿಗೆ ವಯೋಮಿತಿ ಆಗುತ್ತಿದ್ದು, ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಬೇರೆ ಪ್ರದೇಶಗಳ ಯುವಕರ ಬದಲು ಸ್ಥಳೀಯರನ್ನೇ ಪರಿಗಣಿಸಬೇಕು. ಈ ಬಗ್ಗೆ ನೌಕಾನೆಲೆಯ ಅಧಿಕಾರಿಗಳ ಜೊತೆ ಚರ್ಚಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಮುಖರಾದ ರಾಜು ಟಿ.ಹರಿಕಂತ್ರ, ಶ್ರೀಧರ ಹರಿಕಂತ್ರ, ವೆಂಕಟೇಶ ಈರ ನಾಯ್ಕ, ಅವಿನಾಶ ಪಿ.ಮಾಂಗ್ರೆ, ಪೃಥ್ವಿರಾಜ ಪಿ.ಹರಿಕಂತ್ರ, ಚೇತನ ಹರಿಕಂತ್ರ, ಅಭಿಷೇಕ ಹರಿಕಂತ್ರ, ನಾಗರದರ್ಶನ ತಾಂಡೇಲ ಸೇರಿದಂತೆ ಹತ್ತಾರು ಯುವಕರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು