ಕೆ.ಎಲ್.ಭಟ್ಟರಿಗೆ ಸಿಎನ್ಆರ್ ಪ್ರಶಸ್ತಿ

7

ಕೆ.ಎಲ್.ಭಟ್ಟರಿಗೆ ಸಿಎನ್ಆರ್ ಪ್ರಶಸ್ತಿ

Published:
Updated:
ಶಿರಸಿಯ ಗಣೇಶನಗರ ಪ್ರೌಢಶಾಲೆಯ ಶಿಕ್ಷಕ ಕೆ.ಎಲ್.ಭಟ್ ಅವರು ಸಿ.ಎನ್.ಆರ್.ರಾವ್ ಪ್ರಶಸ್ತಿಯನ್ನು ಸ್ವೀಕರಿಸಿದರು (ಬಲದಿಂದ ಮೊದಲನೆಯವರು)

ಶಿರಸಿ: ಶಿಕ್ಷಣ ಕ್ಷೇತ್ರದಲ್ಲಿನ ವೈಜ್ಞಾನಿಕ ಸಾಧನೆಗಾಗಿ ಬೆಂಗಳೂರಿನ ಜವಾಹರಲಾಲ್ ನೆಹರು ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ನೀಡುವ ರಾಷ್ಟ್ರ ಮಟ್ಟದ ಸಿ.ಎನ್.ಆರ್.ರಾವ್ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಯು ಇಲ್ಲಿನ ಗಣೇಶ ನಗರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಲ್.ಭಟ್ಟ ಅವರಿಗೆ ದೊರೆತಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನಿ ಸಿ.ಎನ್.ಆರ್.ರಾವ್ ಹಾಗೂ ಸಂಸ್ಥೆಯ ಅಧ್ಯಕ್ಷ ವಿ. ನಾಗರಾಜ್ ಅವರು, ಪ್ರಶಸ್ತಿಗೆ ಆಯ್ಕೆಯಾಗಿದ್ದ ಕೆ.ಎಲ್.ಭಟ್ಟ ಹಾಗೂ ಪಶ್ಚಿಮ ಬಂಗಾಳದ ಶಿಕ್ಷಕ ಸ್ಯಾಮುವಲ್ ಆಲಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹ 15ಸಾವಿರ ನಗದು, ಫಲಕವನ್ನು ಒಳಗೊಂಡಿದೆ.

ಸಂಸ್ಥೆಯು ಪ್ರತಿ ವರ್ಷ ವಿಜ್ಞಾನದಲ್ಲಿ ಸಾಧನೆ ಮಾಡಿದ ದೇಶದ ಇಬ್ಬರು ಶಿಕ್ಷಕರನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತದೆ. ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಗಣೇಶನಗರದ ಮಕ್ಕಳನ್ನು ವಿಜ್ಞಾನ ವಸ್ತು ಪ್ರದರ್ಶನಕ್ಕೆ ಅಣಿಗೊಳಿಸಿದ ಕೀರ್ತಿ ಕೆ.ಎಲ್.ಭಟ್ಟ ಅವರದಾಗಿದೆ. ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸಿದ್ಧಪಡಿಸಿದ ಮಿತ ಮಾಲಿನ್ಯದ ಒಲೆ, ಕೊಳವೆ ಕಾಂಪೋಸ್ಟ್, ನಾವೀನ್ಯ ನಂದಾದೀಪ ಮಾದರಿಗಳು ರಾಷ್ಟ್ರ ಮಟ್ಟದ ಬಹುಮಾನ ಪಡೆದಿದ್ದವು.

ಭಟ್ಟರ ಸಾಧನೆಗೆ ಮುಖ್ಯ ಶಿಕ್ಷಕ ಎಂ.ಎಚ್.ನಾಯ್ಕ, ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಕಾಶ ಆಚಾರಿ, ಡಿಡಿಪಿಐ ಸಿ.ಎಸ್.ನಾಯ್ಕ, ಬಿಇಒ ಸದಾನಂದ ಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !