ಸೋಮವಾರ, ನವೆಂಬರ್ 18, 2019
24 °C

ಕಾರವಾರದಲ್ಲಿ ಮುಂದುವರಿದ ಮಳೆ: ಸಮುದ್ರಕ್ಕೆ ಇಳಿಯಲಿಲ್ಲ ದೋಣಿಗಳು

Published:
Updated:

ಕಾರವಾರ: ನಗರ ಹಾಗೂ ಸುತ್ತಮುತ್ತ ಬುಧವಾರ ಬೆಳಗಿನ ಜಾವದಿಂದ ಆಗಾಗ ಜೋರಾಗಿ ಮಳೆಯಾಗುತ್ತಿದೆ. ಆಗಾಗ ರಭಸದ ಗಾಳಿಯೂ ಜೊತೆಯಾಗುತ್ತಿದೆ. ತಗ್ಗಿನಲ್ಲಿರುವ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಮೀನುಗಾರರು ಸಮುದ್ರಕ್ಕಿಳಿದಿಲ್ಲ. ಈಗಾಗಲೇ ಮೀನುಗಾರಿಕೆಗೆ ತೆರಳಿದ್ದ ಮಂಗಳೂರು, ಮಲ್ಪೆ, ಗೋವಾದ ದೋಣಿಗಳು ಕಾರವಾರದ ಬೈತಖೋಲ್ ಬಂದರಿಗೆ ವಾಪಸಾಗಿ ಲಂಗರು ಹಾಕಿವೆ.
 

ಪ್ರತಿಕ್ರಿಯಿಸಿ (+)