ಬುಧವಾರ, ಸೆಪ್ಟೆಂಬರ್ 22, 2021
29 °C

ಕಾರವಾರ ಕಡಲಿನಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಾರವಾರ ಬಂದರಿನ ಬಳಿ ಸಮುದ್ರದಲ್ಲಿ‌ ಎಂಜಿನ್ ವೈಫಲ್ಯದಿಂದಾಗಿ‌ ಮುಳುಗುವ‌ ಹಂತದಲ್ಲಿದ್ದ ಮೀನುಗಾರಿಕೆ‌ ಬೋಟ್ ಅನ್ನು ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ದಡ ಸೇರಿಸಿದೆ.

ಶ್ರೀದುರ್ಗಾ ಹೆಸರಿನ ಬೋಟ್ ಮುಳುಗಡೆ ಆಗುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಕಾರವಾರ ಮೀನುಗಾರಿಕೆ ಇಲಾಖೆಗೆ ಮಾಹಿತಿ ಬಂದಿತ್ತು. ಅದನ್ನು ಕೂಡಲೇ ಕರಾವಳಿ ಕಾವಲು ಪಡೆಗೆ ರವಾನಿಸಲಾಗಿತ್ತು.

ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ಕರಾವಳಿ ಕಾವಲು ಪಡೆ, ಬೋಟ್ ಇರುವ ಸ್ಥಳಕ್ಕೆ ತೆರಳಿ, ಅದರಲ್ಲಿದ್ದ 8 ಜನರೊಂದಿಗೆ ಬೋಟ್ ಅನ್ನು ಟೋಯಿಂಗ್ ಮೂಲಕ ಕಾರವಾರ ಬಂದರಿಗೆ ತರಲಾಗಿದೆ.

ಬೋಟ್, ಅದರಲ್ಲಿದ್ದ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಯಾವುದೇ ಹಾನಿ ಆಗಿಲ್ಲ ಎಂದು ಕರಾವಳಿ ಕಾವಲು ಪಡೆ ಕಮಾಂಡೆಂಟ್ ಎಸ್.ಎಸ್. ದಸಿಲ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು