ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಸಚಿವ ಸುಧಾಕರ್ ಉಮ್ಮಚಗಿ ಭೇಟಿ

ಯಲ್ಲಾಪುರ ತಾಲ್ಲೂಕಿನ ಜ್ಯೋತಿಷ ಶಾಸ್ತ್ರದ ಅಧ್ಯಾಪಕರೊಂದಿಗೆ ಚರ್ಚೆ
Last Updated 31 ಜನವರಿ 2021, 15:46 IST
ಅಕ್ಷರ ಗಾತ್ರ

ಯಲ್ಲಾಪುರ (ಉತ್ತರ ಕನ್ನಡ): ತಾಲ್ಲೂಕಿನ ಉಮ್ಮಚಗಿ ಸಮೀಪದ ‘ಸುಮೇರು ಜ್ಯೋತಿರ್ವನ’ಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಭಾನುವಾರ ಖಾಸಗಿ ಭೇಟಿ ನೀಡಿದರು.

ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ಜ್ಯೋತಿಷ ಶಾಸ್ತ್ರದ ಅಧ್ಯಾಪಕ ಡಾ.ನಾಗೇಶ ಭಟ್ಟ ಈ ಜ್ಯೋತಿರ್ವನದ ನಿರ್ಮಾತೃವಾಗಿದ್ದಾರೆ. 10 ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರ ಪ್ರಕಾರದಲ್ಲಿ ಈ ವನ ನಿರ್ಮಿಸಲಾಗಿದೆ.

ಜ್ಯೋತಿರ್ವನದ ಮಾಹಿತಿ ಪಡೆದುಕೊಳ್ಳಲು ಸಚಿವರು ಬಂದಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ವನಕ್ಕೆ ಭೇಟಿ ನೀಡಲಿಲ್ಲ. ಕೇವಲ ಡಾ. ನಾಗೇಶ ಭಟ್ಟ ಅವರ ಬಳಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿ, ಶಿರಸಿಗೆ ತೆರಳಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದರು.

ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶಿರಸಿಗೆ ಆಗಮಿಸಿದ ಸುಧಾಕರ್, ಬೆಂಗಾವಲು ವಾಹನವಿಲ್ಲದೇ ಖಾಸಗಿ ವಾಹನದಲ್ಲಿ ಬಂದಿದ್ದರು. ಶಿರಸಿಯ ಉದ್ಯಮಿಯೊಬ್ಬರ ಮನೆಯಲ್ಲಿ ಊಟ ಮಾಡಿ ಉಮ್ಮಚಗಿಗೆ ಭೇಟಿ ನೀಡಿದ್ದರು. ಡಾ.ನಾಗೇಶ ಭಟ್ಟ ಅವರ ಬಳಿ ಮಾತನಾಡಲು ಸಚಿವರು ಬೆಂಗಳೂರಿನಿಂದ ಆಗಮಿಸಿದ್ದರೇ ಅಥವಾ ಇನ್ನೇನಾದರೂ ವಿಶೇಷವಿತ್ತೇ ಎನ್ನುವುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT