ಮಂಗಳವಾರ, ಸೆಪ್ಟೆಂಬರ್ 27, 2022
27 °C

ಈಜು ಸ್ಪರ್ಧೆ: ಕರುಣ, ಸ್ವಾತಿ ಪೈ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಸ್ಥಳೀಯ ಲಯನ್ಸ್ ಕ್ಲಬ್ ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಟ್ಟಣದ ವಿಷ್ಣುತೀರ್ಥ ಕರೆಯಲ್ಲಿ ಏರ್ಪಡಿಸಿದ್ದ ಈಜು ಸ್ಪರ್ಧೆಯ 40 ವರ್ಷ ವಯಸ್ಸಿನೊಳಗಿನ ವಿಭಾಗದಲ್ಲಿ ಕರುಣ ಹರಿಕಾಂತ, ಸ್ವಾತಿ ಪೈ ಮೊದಲ ಸ್ಥಾನ ಗಳಿಸಿದರು.

ಕೃಷ್ಣ ಹರಿಕಾಂತ (ದ್ವಿತೀಯ), ಪೃಥ್ವಿರಾಜ ನಾಯ್ಕ( ತೃತೀಯ) ಹಾಗೂ ಮಹಿಳೆಯರ ವಿಭಾಗದಲ್ಲಿ ಪಲ್ಲವಿ ಪ್ರಭು, ಪ್ರೀತಿ ಪ್ರದೀಪ ಹಾಗೂ ಸುಜಾತಾ ನಾಯ್ಕ ಪ್ರಶಸ್ತಿ ಪ‍ಡೆದುಕೊಂಡರು.

1ರಿಂದ 4ನೇ ತರಗತಿ ವಿಭಾಗದಲ್ಲಿ ಆದರ್ಶ ಶೆಟ್ಟಿ, ಚಂದನ ಶಾಸ್ತ್ರಿ, ನಮನ್ ಹರಿಕಾಂತ ಮೊದಲ ಮೂರು ಸ್ಥಾನ ಜಯಿಸಿದರು. ವಿದ್ಯಾರ್ಥಿನಿಯರ ವಿಭಾಗದಲ್ಲಿ ರಿಶಾ ನಾಯ್ಕ, ಅದಿತಿ ಗೋಕರ್ಣ, ಶರವಣಿ ನಾಯ್ಕ ಹಾಗೂ ರಿತಿನ್ಯಾ.ಆರ್ ಮೊದಲ ಮೂರು ಸ್ಥಾನ ತಮ್ಮದಾಗಿಸಿಕೊಂಡರು.

5ರಿಂದ 7ನೇ ತರಗತಿ ವಿಭಾಗದಲ್ಲಿ ಅರ್ಜುನ ಶಾನಭಾಗ, ಪ್ರಥಮೇಶ.ಎಚ್.ಎನ್, ವೈಷ್ಣವ ಪ್ರಭು ಕ್ರಮವಾಗಿ ಮೂರು ಸ್ಥಾನಗಳನ್ನು ಗೆದ್ದರು. 8ರಿಂದ 10ನೇ ತರಗತಿ ವಿಭಾಗದಲ್ಲಿ ಅನಂತ ಶಾನಭಾಗ, ಸುಯೋಗ ಶೆಟ್ಟಿ, ಅಮನ್ ಬಾಡೋರ್ಕರ್ ಹಾಗೂ ಆರ್ಯನ್ ನಾಯ್ಕ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ಭಾಜನರಾದರು.

ವಿದ್ಯಾರ್ಥಿನಿಯರ ವಿಭಾಗದಲ್ಲಿ ಪೂರ್ವಾ ಶಾನಭಾಗ, ಅಕ್ಷತಾ.ಪಿ.ಡಿ ಹಾಗೂ ಶ್ರೇಯಾ ನಾಯ್ಕ ಮೊದಲ ಮೂರು ಸ್ಥಾನ ಪಡೆದುಕೊಂಡರೆ, ಕಾಲೇಜು ವಿಭಾಗದಲ್ಲಿ ಸ್ವಯಂ ಪೈ, ಪ್ರಥಮ ಶಾನಭಾಗ ಹಾಗೂ ಸಂಕಲ್ಪ ನಾಯಕ ಜಯಿಸಿದರು. ವಿದ್ಯಾರ್ಥಿನಿಯರ ವಿಭಾಗದಲ್ಲಿ ಸ್ವಾತಿ ಪೈ, ತೇಜಸ್ವಿನಿ ಶಾನಭಾಗ, ಶರಧಿ ಪವಾರ್ ಹಾಗೂ ಮೋಹಿನಿ ಪೈ ಮೊದಲ ಮೂರು ಪ್ರಶಸ್ತಿ ಪಡೆದುಕೊಂಡರು.

40 ವರ್ಷಕ್ಕಿಂತ ಮೇಲಿನ ಪುರುಷರ ವಿಭಾಗದಲ್ಲಿ ದಿನೇಶ ಬಾಳಗಿ, ಧರ್ಮೇಂದ್ರ ನಾಯ್ಕ, ಹಾಗೂ ಗಣೇಶ ಬಾಳಗಿ ಮೊದಲ ಮೂರು ಸ್ಥಾನ ಪಡೆದರು. ಡಾ. ಎ.ವಿ. ಬಾಳಿಗಾ ಕಲಾ-ವಿಜ್ಞಾನ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಜಿ.ಡಿ.ಭಟ್ಟ ಹಾಗೂ ಈಜು ತರಬೇತುದಾರ ಜಿ.ಸಿ.ಪಟಗಾರ ನಿರ್ಣಾಯಕರಾಗಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಶೇಟ್, ಕಾರ್ಯದರ್ಶಿ ನಾಗರಾಜ ಭಟ್ಟ, ಖಜಾಂಚಿ ಸಪ್ನಾ ನಾಯ್ಕ, ಮಾಜಿ ಡಿಸ್ಟಿಕ್ ಗವರ್ನರ್ ಗಿರೀಶ ಕುಚಿನಾಡ ಬಹುಮಾನ ವಿತರಿಸಿದರು. ಮಂಗಲಾ ಕುಚಿನಾಡ, ಎಚ್.ಎನ್.ನಾಯ್ಕ, ಡಾ.ಎಚ್.ಎಸ್.ಹೆಗಡೆ, ವಿನಯಾ ಹೆಗಡೆ, ಎಂ.ಎಂ.ಹೆಗಡೆ, ಡಾ.ಸತೀಶ ಪ್ರಭು, ಡಾ.ಪ್ರಕಾಶ ಪಂಡಿತ, ರಘುನಾಥ ದಿವಾಕರ, ಎಂ.ಎನ್.ಹೆಗಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು