‘ಸಂಭವನೀಯ ಸಾಲ’ ವರದಿ ಬಿಡುಗಡೆ

7

‘ಸಂಭವನೀಯ ಸಾಲ’ ವರದಿ ಬಿಡುಗಡೆ

Published:
Updated:
Prajavani

ಕಾರವಾರ: ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಒಟ್ಟು ₹5,131.18 ಕೋಟಿ ಮೊತ್ತದ ಸಂಭವನೀಯ ಸಾಲ ಯೋಜನೆಯ ವರದಿಯನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳನ್ನು ಕ್ರಮವಾಗಿ ಅನುಷ್ಠಾನಕ್ಕೆ ತರಬೇಕು. ಆ ಮೂಲಕ ಸರಿಯಾಗಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು. ಬ್ಯಾಂಕ್‌ಗಳು ಸಾಲ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಿ, ಆದಷ್ಟು ಶೀಘ್ರ ಅರ್ಹರಿಗೆ ಸೌಲಭ್ಯ ದೊರೆಯುವುದನ್ನು ಖಾತ್ರಿಪಡಿಸಬೇಕು’ ಎಂದು ಹೇಳಿದರು.

‘ವಿವಿಧ ಇಲಾಖೆಗಳ ಸಾಲ ಯೋಜನೆಯ ಅಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಂದ ವಿವಿಧ ಬ್ಯಾಂಕ್‌ಗಳ ವಿರುದ್ಧ ದೂರುಗಳು ಬಂದಿವೆ. ಫಲಾನುಭವಿಗಳಿಂದ ಸೂಕ್ತದಾಖಲೆಗಳನ್ನು ಪಡೆದು, ಸಾಲವನ್ನು ಬಿಡುಗಡೆ ಮಾಡಿ’ ಎಂದು ಸೂಚಿಸಿದರು.

‘ಪ್ರಸ್ತುತ ಹಣಕಾಸು ಸಾಲಿನ ವಾರ್ಷಿಕ ಸಾಲ ಯೋಜನೆ ಮೊತ್ತ 2018- 19ನೇ ಸಾಲಿಗಿಂತ ₹654 ಕೋಟಿ ಅಧಿಕವಾಗಿದೆ’ ಎಂದು ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ (ಡಿಡಿಎಂ)  ಎಲ್.ಯೋಗೇಶ್ ಹೇಳಿದರು.

ಆರ್‌ಬಿಐ ಬೆಂಗಳೂರು ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಪಟ್ನಾಯಕ, ಜಿಲ್ಲಾ ಲೀಡ್‌ ಬ್ಯಾಂಕ್ ವ್ಯವಸ್ಥಾಪಕ ಪಿ.ಎಂ.ಪಿಂಜರ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಶ್ಯಾಮಲಾ ಮಹಾಲೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !